ಅಟಲ್ ಬಿಹಾರಿ ವಾಜಪೇಯಿ 
ದೇಶ

ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದ ಮೊದಲ ರಾಷ್ಟ್ರ ನಾಯಕ ಅಟಲ್ ಬಿಹಾರಿ ವಾಜಪೇಯಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೆಂದರೆ ನಮಗೆ ತಕ್ಷಣ ನೆನಪಾಗುವುದು ಅವರ ಭಾಷಣದ ವೈಖರಿ, ಪರಿಣಾಮಕಾರಿ ಭಾಷಣಗಳಿಂದಲೇ ಜಗತ್ತಿನ ನಾಯಕರ ಗಮನ ಸೆಳೆದಿದ್ದ ಅಟಲ್ ಬಿಹಾರಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೆಂದರೆ ನಮಗೆ ತಕ್ಷಣ ನೆನಪಾಗುವುದು ಅವರ ಭಾಷಣದ ವೈಖರಿ, ಪರಿಣಾಮಕಾರಿ ಭಾಷಣಗಳಿಂದಲೇ ಜಗತ್ತಿನ ನಾಯಕರ ಗಮನ ಸೆಳೆದಿದ್ದ ಅಟಲ್ ಬಿಹಾರಿ ವಾಜಪೇಯಿ, ವಿಶ್ವಸಂಸ್ಥೆಯಲ್ಲೂ ತಮ್ಮ ಭಾಷಣದ ಛಾಪು ಮೂಡಿಸಿದ್ದರು. 
ಪಾಕಿಸ್ತಾನದ ಕಿರಿಕಿರಿ, ಚೀನಾದ ಕ್ಯಾತೆ ಸೇರಿದಂತೆ ಭಾರತ ಎದುರಿಸುತ್ತಿದ್ದ ಸಮಸ್ಯೆಗಳನ್ನು ಹಾಗೂ ಅದರಿಂದ ಹೊರಬರಲು ಭಾರತ ಕೈಗೊಳ್ಳುತ್ತಿದ್ದ ಕ್ರಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು, ಮೊದಲ ಬಾರಿಗೆ 1977 ರಲ್ಲಿ ವಿದೇಶಾಂಗ ಸಚಿವರಾದಾಗ ವಿಶ್ವಸಂಸ್ಥೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದರು. ಹೀಗೆ ವಿಶ್ವಸಂಸ್ಥೆಯಲ್ಲಿ ಸಮರ್ಥವಾಗಿ ಮಾತನಾಡಿದ್ದು ಹಿಂದಿಯಲ್ಲಿ ಎನ್ನುವುದು ವಿಶೇಷ. ವಿಶ್ವಸಂಸ್ಥೆಯಲ್ಲಿ ಭಾರತದ ಭಾಷೆಯಾದ ಹಿಂದಿಯಲ್ಲಿ ಮಾತನಾಡಿದ ಮೊದಲ ನಾಯಕ ಎಂಬ ಖ್ಯಾತಿ ಅಟಲ್ ಬಿಹಾರಿ ವಾಜಪೇಯಿ ಅವರ ಖಾತೆಯಲ್ಲಿದೆ. 
ವಿದೇಶಾಂಗ ನೀತಿಯಲ್ಲಿ ಚಾಣಾಕ್ಷತನ ತೋರುತ್ತಿದ್ದ ಅತಲ್ ಬಿಹಾರಿ ವಾಜಪೇಯಿ ಅಕ್ಷರಸಹ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದರು. ತಮ್ಮ ಈ ಚಾಣಾಕ್ಷತನದಿಂದಲೇ ಪೋಖ್ರಾನ್ ಅಣು ಪರೀಕ್ಷೆಯನ್ನು ಜಗತ್ತಿನ ಮುಂದೆ ಸಮರ್ಥಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ಈ ಬೆಳವಣಿಗೆ ನಂತರ ಅಮೆರಿಕ ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ