ಅಜಾತ ಶತ್ರುವಿಗೆ ಅಶ್ರುತರ್ಪಣ
ನವದೆಹಲಿ: ನಮ್ಮನ್ನಗಲಿದ ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಪಯಣ ನಡೆಯುತ್ತಿರುವಂತೆಯೇ ದೇಶಕಂಡ ಪ್ರಬುದ್ಧ ರಾಜಕಾರಣಿ ಮತ್ತು ಮಾನವತಾವಾದಿಗೆ ವಿಶ್ವಾದ್ಯಂತ ಅಶ್ರುತರ್ಪಣ ಸಲ್ಲಿಕೆ ಮಾಡಲಾಗಿದೆ.
ಇತ್ತ ದೆಹಲಿಯಲ್ಲಿರುವ ಬ್ರಿಟನ್ ರಾಯಭಾರ ಕಚೇರಿ ಅಧಿಕಾರಿಗಳು ಬ್ರಿಟನ್ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ವಾಜಪೇಯಿ ಅವರಿಗೆ ಗೌರವ ಸಲ್ಲಿಕೆ ಮಾಡಿದೆ. ಈ ಬಗ್ಗೆ ಮಾತನಾಡಿರಕುವ ದೆಹಲಿಯಲ್ಲಿರುವ ಬ್ರಿಟನ್ ರಾಯಭಾರಿ ಡೊಮಿನಿಕ್ ಅಸ್ಕ್ವಿತ್ ಅವರು, ನಿಜಕ್ಕೂ ವಾಜಪೇಯಿ ಅವರು ಅಗಾಧ ಮಾನವೀಯತೆ ಉಳ್ಳ ಪ್ರಮುಖ ವ್ಯಕ್ತಿ. ಅವರ ಸಾವು ನಮಗೆ ದೊಡ್ಡ ನಷ್ಟ. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಇನ್ನು ವಾಜಪೇಯಿ ಅಗಲಿಕೆಗೆ ಸಂತಾಪ ಸೂಚಿಸಿರುವ ಮಾರಿಷಸ್ ತನ್ನ ಸರಕಾರೀ ಕಚೇರಿಗಳಲ್ಲಿ ತನ್ನ ರಾಷ್ಟ್ರಧ್ವಜವನ್ನು ಅರ್ಧ ಎತ್ತರದಲ್ಲಿ ಹಾರಾಟ ಮಾಡಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಅಂತೆಯೇ ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ, ಬಾಂಗ್ಲಾದೇಶ ವಿದೇಶಾಂಗ ಸಚಿವರು ದೆಹಲಿಗೆ ಆಗಮಿಸಿದ್ದಾರೆ.
ಇನ್ನು ಕೆಲವೇ ಕ್ಷಣಗಳಲ್ಲಿ ವಾಜಪೇಯಿ ಅವರ ಅಂತ್ಯಕ್ರಿಯೆ ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics