ಫಾರೂಖ್ ಅಬ್ದುಲ್ಲಾ 
ದೇಶ

ಭಾರತ-ಪಾಕ್ ನಡುವೆ ಶಾಂತಿ ಸ್ಥಾಪನೆಯೇ ವಾಜಪೇಯಿಗೆ ಸಲ್ಲಿಸುವ ಗೌರವ: ಫಾರೂಖ್ ಅಬ್ದುಲ್ಲಾ

ಭಾರತ ಹಾಗೂ ಪಾಕಿಸ್ತಾನ ನಡುವೆ ಉತ್ತಮ ಬಾಂಧವ್ಯ ಮತ್ತು ಶಾಂತಿ ಸ್ಥಾಪನೆಯಾದರೆ ಅದು ಅಜಾತಶತ್ರು, ...

ಶ್ರೀನಗರ: ಭಾರತ ಹಾಗೂ ಪಾಕಿಸ್ತಾನ ನಡುವೆ ಉತ್ತಮ ಬಾಂಧವ್ಯ ಮತ್ತು ಶಾಂತಿ ಸ್ಥಾಪನೆಯಾದರೆ ಅದು ಅಜಾತಶತ್ರು, ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸುವ ಮಹಾನ್ ಗೌರವ ಎಂದು ನ್ಯಾಷನಲ್ ಕಾನ್ಫೆರೆನ್ಸ್ ನ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಎಎನ್ಐ ಜೊತೆ ಮಾತನಾಡಿದ ವಾಜಪೇಯಿ ಒಬ್ಬ ಮಹಾನ್ ವ್ಯಕ್ತಿ. ಅವರಲ್ಲಿದ್ದ ಮೌಲ್ಯಗಳನ್ನು ಮತ್ತೊಬ್ಬ ನಾಯಕರಲ್ಲಿ ನೋಡಲು ಸಾಧ್ಯವೇ ಇಲ್ಲ. ಅವರು ಆರ್ ಎಸ್ಎಸ್ ಮತ್ತು ಭಾರತೀಯಜನಸಂಘದಿಂದ ಬಂದಿದ್ದರೂ ಸಿದ್ಧಾಂತ ಬೇರೆಯೇ ಆಗಿತ್ತು. ವಾಜಪೇಯಿ ಅವರು ಭಾರತ ಎಲ್ಲರ ದೇಶವಾಗಬೇಕು ಎಂದು ಬಯಸಿದ್ದರು. ಅಲ್ಲದೆ ಪಾಕಿಸ್ತಾನದೊಂದಿಗೆ ಉತ್ತಮ ಸ್ನೇಹ ಹೊಂದಬೇಕು ಎಂದು ಬಯಸಿದ್ದರು. ಆದರೆ ದುರಾದೃಷ್ಟವಶಾತ್ ಅದನ್ನು ಸಾಧಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದರು.
ಸದ್ಯದ ಕೇಂದ್ರ ಸರ್ಕಾರ ಮತ್ತು ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ವಾಜಪೇಯಿ ಅವರ ಕನಸು ನನಸು ಮಾಡುವ ವಿಶ್ವಾಸವಿದೆ ಮತ್ತು ಅದುವೇ ಅಜಾತಶತ್ರುವಿಗೆ ಸಲ್ಲಿಸುವ ಮಹಾನ್ ಗೌರವ್ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಇನ್ನು ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪಾಕ್ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ ಅವರು, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಶಾಂತಿಯ ಕನಸನ್ನು ನನಸು ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!