ದೇಶ

ಮುಲ್ಲಪೆರಿಯಾರ್ ಜಲಾಶಯದ ನೀರಿನ ಮಟ್ಟ 3 ಅಡಿ ಕಡಿಮೆ ಮಾಡಲು ಸುಪ್ರೀಂ ನಿರ್ದೇಶನ

Srinivas Rao BV
ಪ್ರಹಾವಕ್ಕೆ ಸಿಲುಕಿರುವ ಕೇರಳದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಮುಲ್ಲಪೆರಿಯಾರ್ ಜಲಾಶಯದ ನೀರು ಸಂಗ್ರಹ ಮಟ್ಟವನ್ನು 3 ಅಡಿಗಳಷ್ಟು ಕಡಿಮೆ ಮಾಡಲು ಸೂಚನೆ ನೀಡಿದೆ. 
ಮುಲ್ಲಪೆರಿಯಾರ್ ಜಲಾಶಯದ ವಿಪತ್ತು ನಿರ್ವಹಣಾ ಉಪಸಮಿತಿಗೆ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ. ಸುಮಾರು 142 ಅಡಿ ಇರುವ ಜಲಾಶಯವನ್ನು 139 ಅಡಿಗಳಿಗೆ ಇಳಿಸುವುದನ್ನು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. 
ನ್ಯಾ.ದೀಪಕ್ ಮಿಶ್ರಾ ಹಾಗೂ ನ್ಯಾ.ಇಂದು ಮಲ್ಹೋತ್ರ ಅವರಿದ್ದ ವಿಭಾಗೀಯ ಪೀಠ ಕೇರಳದ ಪ್ರವಾಹ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಉಪಸಮಿತಿ ನಡೆ ನಾಳೆ ಸಭೆ ನಡೆಸಬೇಕು, ತಮಿಳುನಾಡು, ಕೇರಳ ರಾಜ್ಯದ ಮುಖ್ಯಕಾರ್ಯದರ್ಶಿಗಳೂ ಭಾಗಿಯಾಗಿರಬೇಕೆಂದು ಹೇಳಿದೆ.
SCROLL FOR NEXT