ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದ ಪಾಕ್ ಮಾಜಿ ಪ್ರಧಾನಿ ಬೆನಝಿರ್ ಭುಟ್ಟೋ
ಅಟಲ್ ಬಿಹಾರಿ ವಾಜಪೇಯಿ ಮಾತುಗಳು, ಭಾಷಣ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಜನರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರ ಭಾಷಣಗಳನ್ನು ರಾಜಕೀಯ ವಿರೋಧಿಗಳಿರಲಿ, ನೆರೆ ರಾಷ್ಟ್ರ ಸಾಂಪ್ರದಾಯಿಕ ವಿರೋಧಿಯಾಗಿದ್ದ ಪಾಕಿಸ್ತಾನದವರೂ ಇಷ್ಟಪಡುತ್ತಿದ್ದರಂತೆ. ಹಾಗಿತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯತೆ!.
ನೆರೆ ರಾಷ್ಟ್ರ ಪಾಕಿಸ್ತಾನದ ಭಾರತ ದ್ವೇಷ ಜಗತ್ಪ್ರಸಿದ್ಧಿ. ಯುದ್ಧೋನ್ಮಾದದಲ್ಲಿ ಭಾರತದೊಂದಿಗೆ ಕಾಲು ಕೆರೆದುಕೊಂಡು ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ಮಾಜಿ ಪ್ರಧಾನಿ ಸರಿಯಾದ ಪಾಠವನ್ನೇ ಕಲಿಸಿದ್ದರು. ಆದರೂ ಸಹ ಪಾಕಿಸ್ತಾನದ ಜನತೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು, ಅವರ ನಾಯಕತ್ವವನ್ನು ಇಷ್ಟಪಡುತ್ತಿದ್ದರಂತೆ. ಈ ವಿಷಯವನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರ ಮಾಧ್ಯಮ ಸಹಲೆಗಾರರಾಗಿದ್ದ ಅಶೋಕ್ ಕುಮಾರ್ ಟಂಡನ್ ಮಾಜಿ ಪಿಟಿಐ ವಿಶೇಶ ಪ್ರತಿನಿಧಿ ಸ್ವತಃ ಕಂಡಿದ್ದನ್ನು ಉಲ್ಲೇಖಿಸಿದ್ದಾರೆ.
1999 ರಲ್ಲಿ ಲಾಹೋರ್ ಗೆ ಐತಿಹಾಸಿಕ ಭೇಟಿ ನೀಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೆಡೆಗೆ ಸ್ನೇಹಹಸ್ತ ಚಾಚಿದ್ದರು. ಈ ವೇಳೆ ಅಲ್ಲಿನ ಪ್ರಧಾನಿಯಾಗಿದ್ದ ನವಾಜ್ ಷರೀಫ್ ವಾಜಪೇಯಿ ಅವರೊಂದಿಗೆ ಮಾತನಾಡುತ್ತಾ "ವಾಜಪೇಯಿ ಅವರೇ ಈಗ ನೀವು ಇಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬಹುದು" ಎಂದಿದ್ದರಂತೆ. ಅಟಲ್ ಬಿಹಾರಿ ವಾಜಪೇಯಿ ಅವರ ಚರೀಷ್ಮಾ, ಜನಪ್ರಿಯತೆ ಹಾಗಿತ್ತು ಎನ್ನುತ್ತಾರೆ ಅಶೋಕ್ ಕುಮಾರ್ ಟಂಡನ್.
"ಅಮೃತ್ ಸರದಿಂದ ಲಾಹೋರ್ ಗೆ ವಿಶೇಷ ಬಸ್ ಸಂಪರ್ಕ ಕಲ್ಪಿಸಿದಾಗ ನಾನು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಇದ್ದೆ" ಆ ಸಂದರ್ಭದಲ್ಲಿ ಲಾಹೋರ್ ನ ಗೌರ್ನರ್ ನಿವಾಸದಲ್ಲಿ ಭಾಷನ ಮಾಡುತ್ತ ಅಟಲ್ ಬಿಹಾರಿ ವಾಜಪೇಯಿ ಅವರು ಶಾಂತಿಗಾಗಿ ಕರೆ ನೀಡಿದ್ದು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಪಾಕಿಸ್ತಾನ ಜನತೆಯೂ ವಾಜಪೇಯಿ ಅವರ ಭಾಷಣ, ಶಾಂತಿಯ ಕರೆಗೆ ಮನಸೋತಿದ್ದರು ಎಂದು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಒಡನಾಟದ ದಿನಗಳನ್ನು ಅಶೋಕ್ ಕುಮಾರ್ ನೆನಪಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics