ವಾಜಪೇಯಿ ಅವರ ಅಪರೂಪದ ಫೋಟೋ ಶೇರ್ ಮಾಡಿದ ಅಖಿಲೇಶ್ ಯಾದವ್
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆಗಿರುವ ಫೋಟೋವನ್ನು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ತಮ್ಮ ಟ್ವಿಟ್ಟರ್ ನಲ್ಲಿ ...
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆಗಿರುವ ಫೋಟೋವನ್ನು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
1999ರಲ್ಲಿ ಡಿಂಪಲ್ ಜೊತೆ ಅಖಿಲೇಶ್ ಯಾದವ್ ವಿವಾಹವಾಗಿತ್ತು, ಈ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿವಾಹಕ್ಕೆ ಹಾಜರಾಗಿದ್ದರು, ಆ ಪೋಟೋವನ್ನು ಅಖಿಲೇಶ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಅಟಲ್ ಜೀ ರಾಜಕೀಯದ ಜೊತೆಗೆ ಪಕ್ಷದ ಸಿದ್ದಾಂತ ಹಾಗೂ ವಯಕ್ತಿಕ ತತ್ವಾದರ್ಶಗಳ ವಿಚಾರವಾಗಿ ಸಹನೆಯಿಂದಿರಲು ನಮಗೆ ಕಲಿಸಿದರು, ಇತರ ದೇಶಗಳೊಂದಿಗೆ ಸ್ನೇಹದಿಂದಿರುವುದನ್ನು ಕಲಿಸಿದರು, ಅಟಲ್ ಜೀ ಅವರ ನಿಧನದಿಂದ ಭಾರತದ ರಾಜಕಾರಣ, ಹಾಗೂ ಸಾಹಿತ್ಯ ಕ್ಷೇತ್ರ ಪ್ರಮುಖ ಧ್ವನಿ ಕಳೆದುಕೊಂಡಂತಾಗಿದೆ, ಅವರಿಗೆ ಮೌನ ವಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.