ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹರ್ಯಾಣ: ಪತಿಗೇ ತ್ರಿವಳಿ ತಲಾಖ್ ನೀಡಿದ ಪತ್ನಿ, ಸೋದರ ಸಂಬಂಧಿ ಜೊತೆ ಪರಾರಿ!

ಮುಸ್ಲಿಂ ಮಹಿಳೆಗೆ ಪತಿ ತಲಾಖ್ ಕೊಡುವ ಸುದ್ದಿ ಈ ವರೆಗೂ ಸಾಮಾನ್ಯವಾಗಿತ್ತು. ಆದರೆ ಹರ್ಯಾಣದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಪತ್ನಿಯೇ ಪತಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ವರದಿಯಾಗಿದೆ.

ತ್ರಿವಳಿ ತಲಾಖ್
Srinivas Rao BV
Updated On : 18 Aug 2018, 8:33 am
ಹರ್ಯಾಣ: ಮುಸ್ಲಿಂ ಮಹಿಳೆಗೆ ಪತಿ ತಲಾಖ್ ಕೊಡುವ ಸುದ್ದಿ ಈ ವರೆಗೂ ಸಾಮಾನ್ಯವಾಗಿತ್ತು. ಆದರೆ ಹರ್ಯಾಣದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಪತ್ನಿಯೇ ಪತಿಗೆ ತ್ರಿವಳಿ ತಲಾಖ್ ನೀಡಿರುವ  ಘಟನೆ ವರದಿಯಾಗಿದೆ. 
ಮೂವರು ಮಕ್ಕಳ ತಾಯಿಯಾಗಿರುವ ಶಾಝಿಯಾ, ಪತಿ ಅಬ್ಬಾಸ್ ಗೆ ತಲಾಖ್ ನೀಡಿದ್ದು, ತನ್ನ ಸೋದರ ಸಂಬಂಧಿಯೂ ಆಗಿರುವ ಪ್ರಿಒಯಕರನ ಜೊತೆಗೆ ಪರಾರಿಯಾಗಿದ್ದಾಳೆ. ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಕಳೆದ ವರ್ಷ  ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಕಾನೂನು ಬಾಹೀರ ಎಂದು ಹೇಳಿತ್ತು. ತ್ರಿವಳಿ ತಲಾಖ್ ನ್ನು ಅಪರಾಧ ಎಂದು ಪರಿಗಣಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು ರಾಜ್ಯಸಭೆಯಲ್ಲಿ ಇನ್ನಷ್ಟೇ ಅಂಗೀಕಾರವಾಗಬೇಕಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement