ಬಂಗಾಳ ಶಾಲಾ ಪಠ್ಯಕ್ರಮದಲ್ಲಿ ಎಡವಟ್ಟು ಮಿಲ್ಖಾ ಸಿಂಗ್ ಫೋಟೋ ಬದಲು ಫರ್ಹಾನ್ ಅಖ್ತರ್ ಫೋಟೊ ಪ್ರಕಟ!
ಬಂಗಾಳ ಶಾಲಾ ಪಠ್ಯಪುಸ್ತಕದಲ್ಲಿ ಮಿಲ್ಖಾ ಸಿಂಗ್ ಫೋಟೊ ಬದಲು ಆ ಪಾತ್ರದಲ್ಲಿ ಅಭಿನಯಿಸಿದ್ದ ಫರ್ಹಾನ್ ಅಖ್ತರ್ ಫೋಟೊ ಪ್ರಕಟಿಸಲಾಗಿದೆ.
ಶಾಲಾ ಪಠ್ಯದಲ್ಲಿನ ಈ ಎಡವಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ವತಃ ನಟ ಫರ್ಹಾನ್ ಅಖ್ತರ್ ಈ ಪ್ರಮಾದವನ್ನು ಶೀಘ್ರವೇ ಸರಿಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. 2013 ರಲ್ಲಿ ಮಿಲ್ಖಾ ಸಿಂಗ್ ಜೀವನ ಚರಿತ್ರೆಯ ಸಿನಿಮಾದಲ್ಲಿ ಮಿಲ್ಖಾ ಸಿಂಗ್ ಪಾತ್ರದಲ್ಲಿ ಫರ್ಹಾನ್ ಅಖ್ತರ್ ನಟಿಸಿದ್ದರು.
"ಟ್ವಿಟರ್ ನಲ್ಲಿ ಪಠ್ಯದಲ್ಲಿ ಉಂಟಾಗಿರುವ ಪ್ರಮಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫರ್ಹಾನ್ ಅಖ್ತರ್, ಸಿನಿಮಾದ ಫೋಟೊವನ್ನು ಪಠ್ಯಪುಸ್ತಕದಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ, ಸರ್ಕಾರ ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಎಚ್ಚೆತ್ತು ತಪ್ಪನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ.