ದೇಶ

ಕೇರಳ ಪ್ರವಾಹ: ನೀರಿನಲ್ಲಿ ಕೊಚ್ಚಿಹೋದ ಶಾಲಾ ದಾಖಲೆಗಳು, ವಿದ್ಯಾರ್ಥಿ ಆತ್ಮಹತ್ಯೆ

Nagaraja AB

ಕೊಝಿಕೋಡು: 12 ನೇ ತರಗತಿಯ  ದಾಖಲೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದರಿಂದ ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೈಲಾಶ್ (19 ) ಮೃತ ವಿದ್ಯಾರ್ಥಿ. ಕೊಝಿಕೋಡು ಜಿಲ್ಲೆಯ ಕಾರಂತೂರಿನವರಾದ ಈತನ ಮನೆ ನೀರಿನಲ್ಲಿ ಆವೃತ್ತವಾಗಿದ್ದರಿಂದ ಮೂರು ದಿನಗಳಿಂದ  ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದರು.

ಐಟಿಐಗೆ  ದಾಖಲಾಗಿದ್ದ ಕೈಲಾಶ್   ಉನ್ನತ ಶಿಕ್ಷಣಕ್ಕಾಗಿ ಸ್ವಲ್ಪ ಹಣ ಕೊಡಿಟ್ಟ ಜೊತೆಗೆ ಹೊಸ ಬಟ್ಟೆಯನ್ನು ಖರೀದಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ದಿನ ಭಾರೀ ಮಳೆಯಿಂದಾಗಿ ಆತನ ಮನೆ ನೀರಿನಿಂದ ಆವೃತ್ತಗೊಂಡಿದ್ದು, ನೀರಿನಲ್ಲಿ ಶಾಲಾ ದಾಖಲೆಗಳು ಕೊಚ್ಚಿಕೊಂಡು ಹೋಗಿವೆ. ಮಳೆ ನಿಂತ ಮೇಲೆ ಮನೆ ಸ್ವಚ್ಛಗೊಳಿಸುವಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರ ಗಮನಕ್ಕೆ ಬಂದಿದೆ ಎಂದು ಕುನ್ನಮಂಗಲಂ ಠಾಣೆ  ಅಧಿಕಾರಿ ತಿಳಿಸಿದ್ದಾರೆ.

ಕೈಲಾಶ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ ಪೋಷಕರು ಕಂಗಲಾಗಿದ್ದಾರೆ.  ತನ್ನೆಲ್ಲಾ ಕನಸುಗಳು ನೀರಿನಲ್ಲಿ ಕೊಚ್ಚಿಹೋದ ಭಾವಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು  ಪೋಷಕರು ಅಳಲು ತೋಡಿಕೊಂಡಿದ್ದಾರೆ.
SCROLL FOR NEXT