ದೇಶ

ಈದ್ ಪ್ರಾರ್ಥನೆ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ ಫಾರೂಖ್ ಅಬ್ದುಲ್ಲಾ ಮೇಲೆ ಶೂ ಎಸೆತ!

Srinivas Rao BV
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಈದ್ ಪ್ರಾರ್ಥನೆ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ವಿರುದ್ಧ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. 
ಶ್ರೀನಗರದ ಹಜ್ರತ್ಬಾಲ್ ಮಸೀದಿಯಲ್ಲಿ ಈದ್ ಅಂಗವಾಗಿ ನಡೆದ ಪ್ರಾರ್ಥನೆ ವೇಳೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದರು. ಈ ಹಿನ್ನೆಲೆಯಲ್ಲಿ ಫಾರೂಖ್ ಅಬ್ದುಲ್ಲಾ ವಿರುದ್ಧ ವಾಗ್ದಾಳಿಗಳು ನಡೆದಿದೆ. ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಾರೂಖ್ ಅಬ್ದುಲ್ಲಾ, "ದೇಶ ಬದಲಾವಣೆಯಾಗಬೇಕಿದೆ, ನಾನು ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ತಲುಪಿಸಲು ಬಯಸುತ್ತೇನೆ ಎಂದು ಖಾಸಗಿ ಸುದ್ದಿ ವಾಹಿನಿಗೆ ಹೇಳಿದಾರೆ. 
ಶಾಂತಿಯನ್ನು ಕದಡಲು, ವಿರೋಧಿಸುವುದಕ್ಕಾಗಿಯೇ ಕೆಲವರು ಇದ್ದಾರೆ, ಆದರೆ ನಾವು ಶಾಂತಿ ಸೌಹಾರ್ದತೆಗಾಗಿ ಪ್ರಯತ್ನಿಸುತ್ತಲೇ ಇರಬೇಕಾಗುತ್ತದೆ, ನನ್ನ ರಾಜ್ಯದ ಜನತೆ ಇನ್ನೂ ಎಷ್ಟು ಸಮಸ್ಯೆಗಳನ್ನು ಎದುರಿಸಬೇಕು? ಇಡೀ ದೇಶವೇ ಅಭಿವೃದ್ಧಿ ಕಾಣುತ್ತಿರುವಾಗ ನಾವೂ ಅದರ ಜೊತೆ ಹೆಜ್ಜೆ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ. 
ಮಸೀದಿಯಲ್ಲಿ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದಕ್ಕಾಗಿ ಫಾರೂಕ್ ಅಬ್ದುಲ್ಲಾ ಮೇಲೆ ಶೂ ಎಸೆದಿರುವ ಘಟನೆ ನಡೆದಿದ್ದು, ಫಾರೂಕ್ ಅಬ್ದುಲ್ಲಾ ಅನಿವಾರ್ಯವಾಗಿ ಆ ಪ್ರದೇಶದಿಂದ ಹೊರನಡೆದಿದ್ದಾರೆ. 
SCROLL FOR NEXT