ದೇಶ

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ಸಾಧ್ಯವಿಲ್ಲ: ಸಿಇಸಿ ರಾವತ್

Nagaraja AB

ಔರಂಗಬಾದ್ : ಕಾನೂನು ರೂಪಿಸದೆ  ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆಸಲು ಸಾಧ್ಯವಿಲ್ಲ ಎಂದು  ಚುನಾವಣಾ ಆಯೋಗದ ಮುಖ್ಯ ಆಯುಕ್ತ  ಒ. ಪಿ. ರಾವತ್ ಸ್ಪಷ್ಪಪಡಿಸಿದ್ದು, ಈ ಬಗ್ಗೆಗಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆಸುವ ಸಾಧ್ಯತೆ ಇದೆಯಾ ಎಂಬ ಆಯ್ದ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವತ್,  ಆ ರೀತಿಯ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಂದಿನ ವರ್ಷದ ಏಪ್ರಿಲ್ - ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಮಧ್ಯೆ ಮಧ್ಯಪ್ರದೇಶ,  ಚಂಡೀಘಡ, ರಾಜಸ್ತಾನ, ಮತ್ತು  ಮಿಜೋರಾಂ ವಿಧಾನಸಭಾ ಚುನಾವಣೆಯನ್ನು ಈ ವರ್ಷದ ನಂತರ ನಡೆಸಲಾಗುವುದು ಎಂದು ರಾವತ್ ಸ್ಪಷ್ಪಪಡಿಸಿದರು.
ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಬಿಜೆಪಿ ನಾಯಕರು ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕುತ್ತಿದ್ದರು. ಆದರೆ, ಕಾಂಗ್ರೆಸ್  ಒಟ್ಟಿಗೆ ಚುನಾವಣೆ ನಡೆಸುವುದಕ್ಕೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು.
SCROLL FOR NEXT