ಕೇರಳ ಪ್ರವಾಹ ಸಂದರ್ಭದಲ್ಲಿ ದೋಣಿ ಮೂಲಕ ಜನರನ್ನು ರಕ್ಷಿಸಿದ ರಕ್ಷಣಾ ಪಡೆ 
ದೇಶ

ಕೇರಳ ಪ್ರವಾಹ ಪೀಡಿತರ ಪುನರ್ವಸತಿಗೆ ವಿದೇಶಿ ಸರ್ಕಾರಗಳ ಸಹಾಯ ಬೇಡ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಭಾರತ ಯುಎಇ ನೀಡಿರುವ ಆರ್ಥಿಕ ನೆರವನ್ನು ಸ್ವೀಕರಿಸಬೇಕೆ ಅಥವಾ ಸ್ವೀಕರಿಸುತ್ತದೆಯೇ ಎಂಬ ...

ನವದೆಹಲಿ: ಭಾರತ ಯುಎಇ ನೀಡಿರುವ ಆರ್ಥಿಕ ನೆರವನ್ನು ಸ್ವೀಕರಿಸಬೇಕೆ ಅಥವಾ ಸ್ವೀಕರಿಸುತ್ತದೆಯೇ ಎಂಬ ಬಿಸಿಬಿಸಿ ಚರ್ಚೆ, ಊಹಾಪೋಹ ನಡೆಯುತ್ತಿದ್ದುದರ ಮಧ್ಯೆ ಎಲ್ಲದಕ್ಕೂ ವಿರಾಮ ಬೀಳುವ ಸಮಯ ಬಂದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತ ಕೇರಳ ನೆರೆ ಪ್ರವಾಹ ಪರಿಸ್ಥಿತಿಯನ್ನು ದೇಶೀಯ ಪ್ರಯತ್ನಗಳ ಮೂಲಕ ನಿಭಾಯಿಸಲಿದೆ ಎಂದು ಬೇಷರತ್ತಾಗಿ ಘೋಷಿಸಿದೆ.

ಕೇರಳ ನೆರೆ ಪ್ರವಾಹ ಪೀಡಿತರ ಪುನರ್ವಸತಿಗೆ ಹಲವು ದೇಶಗಳ ಸಹಾಯದ ಪ್ರೀತಿಯನ್ನು ಭಾರತ ಗೌರವಿಸುತ್ತದೆ. ಹಲವು ವಿದೇಶಿ ಸರ್ಕಾರಗಳು ಸಹಾಯ ಹಸ್ತ ನೀಡಿ ಮುಂದೆ ಬಂದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ತಡರಾತ್ರಿ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಈಗಿರುವ ನೀತಿಗಳ ಹಾದಿಯಲ್ಲಿ ಕೇಂದ್ರ ಸರ್ಕಾರ ದೇಶೀಯ ಕ್ರಮಗಳು ಮತ್ತು ಪ್ರಯತ್ನಗಳ ಮೂಲಕ ಕೇರಳ ಪ್ರವಾಹ ಪೀಡಿತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ನಡೆಸಲು ಬದ್ಧವಾಗಿದೆ. ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅನಿವಾಸಿ ಭಾರತೀಯರು, ಭಾರತೀಯ ಮೂಲದ ವ್ಯಕ್ತಿಗಳು(ಪಿಐಒ)ಅಂತಾರಾಷ್ಟ್ರೀಯ ಘಟಕಗಳಿಂದ ಮಾತ್ರ ನೆರವನ್ನು ಸ್ವೀಕರಿಸಲಾಗುವುದು ಎಂದಿದೆ.

ಕಳೆದ ಮಂಗಳವಾರ ಥೈಲ್ಯಾಂಡ್ ನ ಭಾರತೀಯ ರಾಯಭಾರಿ ಚುಟಿಂಟೊರ್ನ್ ಗೊಂಗ್ಸಕ್ಡಿ ಟ್ವೀಟ್ ಮಾಡಿ, ಕೇರಳ ಪ್ರವಾಹ ಪರಿಹಾರ ಕಾರ್ಯಕ್ಕೆ ಭಾರತ ಸರ್ಕಾರ ಸಾಗರೋತ್ತರ ದೇಣಿಗೆಯನ್ನು ಸಂಗ್ರಹಿಸುತ್ತಿಲ್ಲ ಎಂದು ಅನೌಪಚಾರಿಕವಾಗಿ ಹೇಳಿರುವುದಕ್ಕೆ ವಿಷಾದಿಸುತ್ತೇನೆ. ಭಾರತೀಯರೊಂದಿಗೆ ನಾವು ಎಂದೆಂದಿಗೂ ಇರುತ್ತೇವೆ ಎಂದಿದ್ದರು.

ನಿನ್ನೆ ಬೆಳಗ್ಗೆ ವಿದೇಶದ ರಾಯಭಾರ ಕಚೇರಿಯ ಭಾರತೀಯ ರಾಯಭಾರಿಯೊಬ್ಬ ಪ್ರತಿಕ್ರಿಯಿಸಿ, ಭಾರತೀಯ ವಿದೇಶಾಂಗ ಕಾರ್ಯಾಲಯ ವಿದೇಶಿ ಸರ್ಕಾರಗಳ ಯಾವುದೇ ದೇಣಿಗೆ ಅಥವಾ ಸಹಾಯವನ್ನು ನಯವಾಗಿ ನಿರಾಕರಿಸುವಂತೆ ಆದೇಶ ನೀಡಿದೆ ಮತ್ತು ವಿದೇಶಿ ಕೊಡುಗೆ ಕಾಯ್ದೆಯಡಿ ವ್ಯಕ್ತಿಗಳಿಂದ ಮಾತ್ರ ದೇಣಿಗೆಗಳನ್ನು ಸಂಗ್ರಹಿಸಬಹುದೆಂದು ತಿಳುಸುತ್ತದೆ ಎಂದಿದ್ದರು.

ಆದರೂ ವಿದೇಶಾಂಗ ರಾಯಭಾರಿಯೊಬ್ಬರು ಪ್ರತಿಕ್ರಿಯಿಸಿ, ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ಇನ್ನೂ ಅಸ್ಪಷ್ಟತೆಯಿದೆ. ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಘಟಕವೆಂದು ಪರಿಗಣಿಸಲ್ಪಟ್ಟಿದೆಯೇ? ಯುಎಇ ಸರ್ಕಾರ ಯಾವುದಾದರೂ ಎನ್ ಜಿಒಗಳ ಮೂಲಕ ಹಣವನ್ನು ಭಾರತಕ್ಕೆ ಕಳುಹಿಸಬಹುದಲ್ಲವೇ, ಅದನ್ನು ಸ್ವೀಕರಿಸುವುದಿಲ್ಲವೇ ಎಂದು ಕೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT