ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ತಮ್ಮ ಪ್ರವಾಸದ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜರ್ಮನಿಯ ಸಂಸತ್ತು ಬುಂದೆಸ್ಟ್ಯಾಗ್ನಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸದ್ಯ ಟ್ರೋಲಿಗರಿಗೆ ಆಹಾರವಾಗಿವೆ.
ಜರ್ಮನಿಯ ಐತಿಹಾಸಿಕ ಕಟ್ಟಡದೊಳಗೆ ತೆಗೆದ ರಾಹುಲ್ ಗಾಂಧಿಯ ಕೆಲ ಫೋಟೋಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿ ಅವರ ಹಲವು ಮುಖಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಬಿಜೆಪಿ ಈ ಫೋಟೋಗಳನ್ನು ರೀಟ್ವೀಟ್ಮಾಡುತ್ತಾ "ಇದನ್ನು ರೀ ಟ್ವೀಟ್ ಮಾಡದೆ ಇರಲು ನಮ್ಮಿಂದ ಸಾಧ್ಯವಾಗಲಿಲ್ಲ" ಎಂದು ಬರೆದುಕೊಂಡಿದೆ.