ಲಂಡನ್: ಡೋಕ್ಲಾಮ್ ವಿವಾದ ಏಕಾ ಏಕಿ ಉಂಟಾಗಿದ್ದಲ್ಲ, ಅದು ಘಟನಾವಳಿಗಳ ಸರಣಿ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯಿಂದ ಇದ್ದಿದ್ದರೆ ಅದನ್ನು ತಡೆಯಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಂಡನ್ ನಲ್ಲಿ ಕಾರ್ಯತಂತ್ರ ಅಧ್ಯಯನಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಡೊಕ್ಲಾಮ್ ವಿವಾದ ಏಕಾಏಕಿ ಸಂಭವಿಸಿದ್ದಲ್ಲ ಅದೊಂದು ಪ್ರಕ್ರಿಯೆಯೇ ಅಗಿದ್ದು, ಪ್ರಧಾನಿ ಅದನ್ನು ಜಾಗರೂಕತೆಯಿಂದ ವೀಕ್ಷಿಸಿದ್ದರೆ ಡೊಕ್ಲಾಮ್ ವಿವಾದವನ್ನು ತಡೆಯಬಹುದಾಗಿತ್ತು. ಡೊಕ್ಲಾಮ್ ವಿವಾದದ ನಂತರವೂ ಚೀನಾದವರು ಅದೇ ಪ್ರದೇಶದಲ್ಲಿದ್ದಾರೆ ಎಂಬುದು ವಾಸ್ತವ ಸಂಗತಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.