ರಣದೀಪ್ ಹೂಡಾ 
ದೇಶ

ಕೇರಳ ಸಂತ್ರಸ್ತರ ಸೇವೆಯಲ್ಲಿ ಬಾಲಿವುಡ್ ನಟ ರಣದೀಪ್ ಹೂಡಾ!

ಮಹಾ ಜಲಪ್ರಳಯದಿಂದ ತತ್ತರಿಸಿರುವ ಕೇರಳಕ್ಕೆ ಸಿಖ್ ಸಮುದಾಯದ ಸ್ವಯಂ ಸೇವಾ ಸಂಸ್ಥೆ ಖಾಲ್ಸಾ ಏಡ್ ನ ಕಾರ್ಯಕರ್ತರು ತೆರಳಿದ್ದು ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ...

ತಿರುವನಂತಪುರಂ: ಮಹಾ ಜಲಪ್ರಳಯದಿಂದ ತತ್ತರಿಸಿರುವ ಕೇರಳಕ್ಕೆ ಸಿಖ್ ಸಮುದಾಯದ ಸ್ವಯಂ ಸೇವಾ ಸಂಸ್ಥೆ ಖಾಲ್ಸಾ ಏಡ್ ನ ಕಾರ್ಯಕರ್ತರು ತೆರಳಿದ್ದು ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. 
ಅದಾಗಲೇ ಖಾಲ್ಸಾ ಏಡ್ ನ ಕಾರ್ಯಕರ್ತರು ಕೇರಳದಲ್ಲಿ ಬೀಡು ಬಿಟ್ಟಿದ್ದು ಸಂತ್ರಸ್ತರಿಗೆ ಆಹಾರವನ್ನು ಪೂರೈಸುತ್ತಿದ್ದಾರೆ. ಖಾಲ್ಸಾ ಏಡ್ ಮೊದಲಿಗೆ 2000 ಜನರಿಗೆ ಆಹಾರ ಪೂರೈಸುವ ಉದ್ದೇಶ ಹೊಂದಿತ್ತು. ಆದರೆ ಅವರಿಗೆ ನೆರವಿನ ಮಹಾಪೂರ ಸಿಕ್ಕಿದ್ದರಿಂದ ಇದೀಗ 15 ಸಾವಿರ ಜನರಿಗೆ ಪ್ರತಿನಿತ್ಯ ಆಹಾರ ಪೂರೈಸುತ್ತಿದ್ದಾರೆ. 
ಇನ್ನು ಬಾಲಿವುಡ್ ನಟ ರಣದೀಪ್ ಹೂಡ ಸಹ ಖಾಲ್ಸಾ ಏಡ್ ಜೊತೆ ಕೈಜೋಡಿಸಿದ್ದು ಕೇರಳ ಸಂತ್ರಸ್ತರಿಗೆ ಆಹಾರ ಬಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 
ರಣದೀಪ್ ಹೂಡಾ ನಿರಾಶ್ರಿತರಿಗೆ ಆಹಾರ ಬಡಿಸುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದ್ದು ಬಾಲಿವುಡ್ ನಟನ ಕಾರ್ಯಕ್ಕೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5 ದಶಕಗಳ ಹಿಂದೆಯೇ ಉಡುಪಿ ಹೊಸ ಆಡಳಿತ ಮಾದರಿಯನ್ನು ಪ್ರಸ್ತುತಪಡಿಸಿದೆ: ಪ್ರಧಾನಿ ಮೋದಿ

ಮೆಕ್ಕೆಜೋಳ, ಹೆಸರುಕಾಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿ: ಪ್ರಧಾನಿ ಮೋದಿಗೆ ರಾಜ್ಯ ಸರ್ಕಾರ ಮನವಿ

ಮೋದಿಜೀ, ಭಾರತದ ಮಕ್ಕಳು ಉಸಿರು ಕಟ್ಟುತ್ತಿದ್ದಾರೆ: Video ಹಂಚಿಕೊಂಡು ಪ್ರಧಾನಿ ಮೌನ ಪ್ರಶ್ನಿಸಿದ ರಾಹುಲ್ ಗಾಂಧಿ!

ರಾಜಸ್ಥಾನ: ಥಾರ್ ಕಾರು, ಬೈಕ್, ಗನ್ ಗಳ ಜೊತೆಗೆ ಭಯಾನಕ ಗ್ಯಾಂಗ್ ವಾರ್! CCTV ಯಲ್ಲಿ ಸೆರೆ

ಉಡುಪಿ: ಪ್ರಧಾನಿ ಮೋದಿಗೆ "ಭಾರತ ಭಾಗ್ಯ ವಿಧಾತ" ಬಿರುದು ನೀಡಿ ಸನ್ಮಾನ

SCROLL FOR NEXT