ದೇಶ

ಎಎಪಿ ಸರ್ಕಾರಿಂದ 20 ಹುತಾತ್ಮರ ಕುಟುಂಬಕ್ಕೆ ತಲಾ 1 ಕೋಟಿ ರು. ಪರಿಹಾರ!

Vishwanath S
ನವದೆಹಲಿ: ಬಿಎಸ್ಎಫ್, ದೆಹಲಿ ಪೊಲೀಸ್ ಮತ್ತು ದೆಹಲಿ ಅಗ್ನಿಶಾಮಕ ದಳದ 20 ಹುತಾತ್ಮ ಕುಟುಂಬಕ್ಕೆ ತಲಾ 1 ಕೋಟಿ ರುಪಾಯಿ ಪರಿಹಾರ ನೀಡಲು ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ನಿರ್ಧರಿಸಿದೆ. 
ತಮ್ಮ ಸೇವಾ ಅವಧಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳ ನೈತಿಕತೆಯನ್ನು ಹೆಚ್ಚಿಸುವ ಸಲುವಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯ ಸರ್ಕಾರ ಅದಾಗಲೇ ಧೈರ್ಯವಾಗಿ ಹೋರಾಡಿ ಮೃತಪಟ್ಟ 20 ಹುತಾತ್ಮರ ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ದೆಹಲಿಯ ಎಎಸಿ ಸರ್ಕಾರ ಹೇಳಿದೆ. 
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ತ್ಯಾಗ ಅಮೂಲ್ಯವಾಗಿದ್ದು. ದೇಶ ಅವರಿಗೆ ಯಾವಾಗಲು ಋಣವಾಗಿರುತ್ತದೆ ಎಂದು ಕಳೆದ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಅದೇ ರೀತಿ ಕಳೆದ ಮೂರು ವರ್ಷಗಳ ಹಿಂದೆ ನಾವು ಹುತಾತ್ಮ ಯೋಧರಿಗೆ ನೆರವಾಗಲು ಅವರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರ ನೀಡಲು ತೀರ್ಮಾನಿಸಿತ್ತು ಎಂದು ಎಎಪಿ ಹೇಳಿದೆ. 
ಜುಲೈ 25ರಂದು ದೆಹಲಿ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿದೆ. 2015ರ ಏಪ್ರಿಲ್ 1ರಂದು ಈ ಯೋಜನೆಯನ್ನು ಮಂಡಿಸಲಾಗಿತ್ತು. 2016ರಲ್ಲಿ ಲೆಫ್ಟಿನೆಂಟ್ ಗೌವರ್ನರ್ ಈ ಯೋಜನೆಯನ್ನು ತಡೆ ಹಿಡಿದಿದ್ದರು. ಇದಕ್ಕೆ ದೆಹಲಿ ಸರ್ಕಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದರು.
SCROLL FOR NEXT