ದೇಶ

ದಲಿತರು, ಮುಸ್ಲಿಂ, ಮಹಿಳೆಯರು, ಭಯದಲ್ಲಿ ಬದುಕುವಂತಾಗಿದೆ - ಪಿ. ಚಿದಂಬರಂ

Nagaraja AB

ನವದೆಹಲಿ:  ದಲಿತರು, ಮುಸ್ಲಿಂ, ಹಾಗೂ ಮಹಿಳೆಯರು ಇಂದು ದೇಶದಲ್ಲಿ ಭಯದಲ್ಲಿ ಬದುಕುವಂತಾಗಿದೆ ಎಂದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಆರೋಪಿಸಿದ್ದಾರೆ.

ದೇಶದಲ್ಲಿನ ಬಹಸಂಖ್ಯಾತ ಜನರಲ್ಲಿ ಭಯದಲ್ಲಿ ಬದುಕು ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರ ಸರಿಯುತ್ತಿದ್ದು, ಇಂತಹ ಪ್ರವೃತ್ತಿ ದೇಶಕ್ಕೆ ಮಾರಕ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿದಂಬರಂ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹಾಗೂ ದೇಶದಲ್ಲಿ ಭಯಮುಕ್ತ ವಾತವಾರಣ ನಿರ್ಮಿಸುವ ನಿಟ್ಟಿನಲ್ಲಿ ವಿರೋಧಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ  ಅವರು ತಿಳಿಸಿದರು.

ಕರ್ನಾಟಕ ಮಾದರಿಯ ಮೈತ್ರಿ ರಾಜಕಾರಣವನ್ನು  ಎಲ್ಲಾ ಕಡೆ ಅನುಕರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ,  ಬಿಜೆಪಿಯನ್ನು ಅಧಿಕಾರದಿಂದ ದೂರು ತಳ್ಳುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಫಲಿತಾಂಶ ಪ್ರಕಟಣೆ ನಂತರ ಮೈತ್ರಿ ಮಾಡಿಕೊಳ್ಳಲಾಯಿತು ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ಮೈತ್ರಿಯಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಟಿಆರ್ ಎಸ್ ಮತ್ತು ತೃಣಮೂಲ ಕಾಂಗ್ರೆಸ್ ಆಕ್ಷೇಪ ಕುರಿತ ವರದಿ ಕುರಿತು ಪ್ರತಿಕ್ರಿಯಿಸಿದ ಚಿದಂಬರಂ , ಆ ಬಗ್ಗೆ ಚುನಾವಣೆವರೆಗೂ ಕಾಯುತ್ತಿದ್ದು, ಅನಂತರ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಚಿದಂಬರಂ ಹೇಳಿದರು.

SCROLL FOR NEXT