ರಕ್ಷಾ ಬಂಧನ: ನಕ್ಸಲ್ ಕಾರ್ಯಾಚರಣೆ ವೇಳೆ ಹುತಾತ್ಮನಾದ ಅಣ್ಣ- ಪ್ರತಿಮೆಗೇ ರಾಖಿ ಕಟ್ಟಿ ಕಣ್ಣೀರಿಟ್ಟ ಸಹೋದರಿ 
ದೇಶ

ರಕ್ಷಾ ಬಂಧನ: ನಕ್ಸಲ್ ಕಾರ್ಯಾಚರಣೆ ವೇಳೆ ಹುತಾತ್ಮನಾದ ಅಣ್ಣ- ಪ್ರತಿಮೆಗೇ ರಾಖಿ ಕಟ್ಟಿ ಕಣ್ಣೀರಿಟ್ಟ ಸಹೋದರಿ

ದೇಶದಾದ್ಯಂತ ರಕ್ಷಾಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ತಮ್ಮ ಪ್ರೀತಿಯ ಸಹೋದರರಿಗೆ ಸಹೋದರಿಯರು ರಾಖಿ ಕಟ್ಟಿ ಸಂತಸವನ್ನು ವ್ಯಕ್ತಪಡಿಸುತ್ತಿದ್ದರೆ ಇಲ್ಲೊಬ್ಬ ಸಹೋದರಿ ನೋವಿನಿಂದ ರಕ್ಷಾಬಂಧನ ದಿನವನ್ನು ಆಚರಣೆ...

ದಂತೇವಾಡ: ದೇಶದಾದ್ಯಂತ ರಕ್ಷಾಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ತಮ್ಮ ಪ್ರೀತಿಯ ಸಹೋದರರಿಗೆ ಸಹೋದರಿಯರು ರಾಖಿ ಕಟ್ಟಿ ಸಂತಸವನ್ನು ವ್ಯಕ್ತಪಡಿಸುತ್ತಿದ್ದರೆ ಇಲ್ಲೊಬ್ಬ ಸಹೋದರಿ ನೋವಿನಿಂದ ರಕ್ಷಾಬಂಧನ ದಿನವನ್ನು ಆಚರಣೆ ಮಾಡಿದ್ದಾಳೆ.
ಸುಕ್ಮಾದ ತೊಂಗಪಾಲ್ ಎಂಬದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈಕೆಯ ಸಹೋದರ 2014ರಲ್ಲಿ ನಕ್ಸಲರ ಗುಂಡಿಗೆ ಬಲಿಯಾಗಿದ್ದರು. 
ಸಹೋದರನೊಂದಿಗೆ ಆತ್ಮೀಯ ಬಂಧನವನ್ನು ಹೊಂದಿದ್ದೆ. ತೊಂಗಪಾಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನ್ನ ಅಣ್ಣ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ 2014ರಲ್ಲಿ ಹುತಾತ್ಮನಾಗಿದ್ದ. ರಕ್ಷಾಬಂಧನ ದಿನದಂದು ಸಹೋದರನಿಲ್ಲ. ಬಹಳ ದುಃಖವಾಗುತ್ತಿದೆ. ಆತನಿಗಾಗಿರುವ ರಾಖಿಯನ್ನು ಮತ್ತೊಬ್ಬರಿಗೆ ಕಟ್ಟಲು ನನಗೆ ಇಷ್ಟವಿಲ್ಲ. ಆದರೆ, ನನ್ನ ಅಣ್ಣನ ಬಗ್ಗೆ ನನಗೆ ಹೆಮ್ಮೆ. ನನಗಿದ್ದದ್ದು ಒಬ್ಬನೇ ಅಣ್ಣ. ಆತನನ್ನು ಕಳೆದುಕೊಂಡಿದ್ದೇನೆ. ಇದೀಗ ಆತನ ಪ್ರತಿಮೆಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದೇನೆಂದು ಯುವತಿ ಹೇಳಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ