ದೇಶ

ವಿಚ್ಛೇದನದ ತೀರ್ಪು ಬಾಕಿ ಇರುವಾಗ ಎರಡನೇ ಮದುವೆ ಸಿಂಧುವಾಗುತ್ತದೆ; ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ವಿಚ್ಛೇದನದ ಅರ್ಜಿ ವಿಚಾರಣೆಯ ಹಂತದಲ್ಲಿ ಇದ್ದರೂ ಕೂಡ ಎರಡನೇ ಮದುವೆ ಸಿಂಧು ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹಿಂದೂ ವಿವಾಹ ಕಾಯ್ದೆಯಡಿ ನಮೂದಿಸಿರುವಂತೆ ಮದುವೆಯಾಗಲು ಸಾಧ್ಯವಿಲ್ಲ ಎಂಬ ಕಾನೂನು ಎರಡನೇ ಮದುವೆ ಅಸಿಂಧು ಅಥವಾ ಅನೂರ್ಜಿತ ಎಂದು ಹೇಳುವುದಿಲ್ಲ ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 15ನ್ನು ವ್ಯಾಖ್ಯಾನಿಸಿದ ಸುಪ್ರೀಂ ಕೋರ್ಟ್, ಎರಡನೇ ವಿವಾಹವಾಗಲು ಕೆಲವು ಸಮಯಗಳವರೆಗೆ ಅಸಾಧ್ಯವಾಗುವುದರಿಂದ ಮೊದಲಿನ ಮದುವೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ, ವಿಚ್ಛೇದನವನ್ನು ನ್ಯಾಯಾಲಯ ನೀಡಿ ಮೊದಲ ಪತ್ನಿಯನ್ನು ಮಾಜಿ ಪತ್ನಿ ಎಂದು ಪರಿಗಣಿಸಿ ಎರಡನೇ ಮದುವೆಯನ್ನು ಊರ್ಜಿತಗೊಳಿಸುತ್ತದೆ ಎಂದು ಹೇಳಿದೆ.

ದೆಹಲಿ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ಎಲ್ ನಾಗೇಶ್ವರ ರಾವ್ ಕಾನೂನಿನ ಸ್ಥಿತಿಯನ್ನು ವಿವರಿಸಿದರು. ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡ ಅಥವಾ ಮನವಿಯನ್ನು ಮುಂದುವರಿಸದಿರಲು ನಿರ್ಧರಿಸಿರುವ ಪ್ರಕರಣಗಳಲ್ಲಿ ಪುನರ್ ವಿವಾಹಕ್ಕೆ ಈ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಆದೇಶ ನೀಡಿದ್ದಾರೆ.

ಹಿಂದೂ ವಿವಾಹ ಕಾಯ್ದೆ ಒಂದು ಸಾಮಾಜಿಕ ಅಭಿವೃದ್ಧಿಯ ಶಾಸನವಾಗಿದ್ದು ಅದನ್ನು ಸಮಾಜದ ಅಭಿವೃದ್ಧಿಯ ಶಾಸನವಾಗಿ ಪರಿಗಣಿಸಬೇಕು. ಇದರಿಂದ ಸಮಾಜ ಸುಧಾರಣೆಯಾಗುತ್ತದೆ ಎಂದು ಹೇಳಿದೆ. 1978ರ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಧೀಶರು.

SCROLL FOR NEXT