ದೇಶ

ಚಿತಾಭಸ್ಮ ವಿಸರ್ಜನೆ: ವಾಜಪೇಯಿಯನ್ನು ಬಿಜೆಪಿ ಚಿಕ್ಕವರಂತೆ ಮಾಡಿದೆ - ಶಿವಸೇನೆ

Nagaraja AB

ಮುಂಬೈ : ಮಾಜಿ ಪ್ರಧಾನಿ ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆಯನ್ನು  ಬಿಜೆಪಿ ರಾಜಕೀಯಗೊಳಿಸುವ ಮೂಲಕ ದೊಡ್ಡ ನಾಯಕನನ್ನು ಅವರ ಮರಣದ ನಂತರ ಚಿಕ್ಕವರನ್ನಾಗಿ ನೋಡುವಂತೆ ಮಾಡಿದೆ ಎಂದು ಶಿವಸೇನೆ ಆರೋಪಿಸಿದೆ.

ಆಗಸ್ಟ್ 16 ರಂದು 93 ವರ್ಷದ ಮಾಜಿ ಪ್ರಧಾನಿ ವಾಜಪೇಯಿ ಮರಣ ನಂತರ ದೇಶಾದ್ಯಂತ ಪ್ರಮುಖ ನದಿಗಳಲ್ಲಿ ಅವರ  ಚಿತಾಭಸ್ಮ ವಿಸರ್ಜಿಸಲು ಬಿಜೆಪಿ ನಿರ್ಧರಿಸಿತ್ತು.  ಬಿಜೆಪಿಯ ಹಿರಿಯ ನಾಯಕರಿಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ ಆದರೆ, ಚಿತಾಭಸ್ಮ ವಿಸರ್ಜೆಗೆ ಪ್ರಾಮುಖ್ಯತೆ ನೀಡಲಾಗಿತ್ತು ಎಂದು  ಶಿವಸೇನೆ ಹೇಳಿಕೆ ನೀಡಿದೆ.

ವಾಜಪೇಯಿ  ಚಿಂತನೆಗನುಗುಣವಾಗಿ ಚಿತಾಭಸ್ಮ ವಿಸರ್ಜಿಸದೆ  ತೋರಿಕೆಯ ಪ್ರೀತಿಯ ಕಾರಣಕ್ಕಾಗಿ  ದೇಶದ  ಪ್ರಮುಖ ನದಿಗಳಲ್ಲಿ ವಿಸರ್ಜಿಸಲಾಗಿದೆ ಎಂದು ಶಿವಸೇನೆ ಮುಖವಾಣಿ  ಸಾಮ್ನಾದಲ್ಲಿ ಟೀಕಿಸಲಾಗಿದೆ.

ವಾಜಪೇಯಿ ಅವರು ಉತ್ತಮ ನಾಯಕರಾಗಿದ್ದರಿಂದ ಅವರ ಅಂತ್ಯಕ್ರಿಯೆ ವೇಳೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರುಗಳು ಪಾಲ್ಗೊಂಡಿದ್ದರು. ಆದರೆ, ಮರಣದ ನಂತರ ಅವರನ್ನು ಚಿಕ್ಕವರನ್ನಾಗಿ ಮಾಡಲಾಗಿದೆ.ಒಂದು ಪಕ್ಷ  ಚಿತಾಭಸ್ಮ ವಿಸರ್ಜನೆ ಮಾಡುವ ಬದಲು ಎಲ್ಲಾ ಪಕ್ಷಗಳೊಂದಿಗೆ ರಾಷ್ಟ್ರೀಯ ಕಾರ್ಯಕ್ರಮವಾಗಿ ವಿಸರ್ಜಿಸಬಹುದಿತ್ತು ಎಂದು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ.

SCROLL FOR NEXT