ಸಂಗ್ರಹ ಚಿತ್ರ 
ದೇಶ

ಉತ್ತರ ಪ್ರದೇಶ: ಐಪಿಎಸ್ ಅಧಿಕಾರಿ ಸಿಎಂ ಯೋಗಿ ಆದಿತ್ಯನಾಥ್ ಗೆ ಬರೆದ 'ವಿವಾದಾತ್ಮಕ ಪತ್ರ' ಸೋರಿಕೆ

ಸಿಎಂ ಯೋಗಿ ಆದಿತ್ಯಾನಾಥ್ ಅವರಿಗೆ ನಿವೃತ್ತರಾಗಲಿರುವ ಐಪಿಎಸ್ ಅಧಿಕಾರಿಯೊಬ್ಬರು ಬರೆದಿರುವ ರಹಸ್ಯ ಪತ್ರವೊಂದು ಇದೀಗ ಸೋರಿಕೆಯಾಗಿದ್ದು, ಪತ್ರದಲ್ಲಿ ಅಧಿಕಾರಿ ಇಟ್ಟಿರುವ ಬೇಡಿಕೆ ಮತ್ತು ಆಫರ್ ಗಳು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಲಖನೌ:  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರಿಗೆ ನಿವೃತ್ತರಾಗಲಿರುವ ಐಪಿಎಸ್ ಅಧಿಕಾರಿಯೊಬ್ಬರು ಬರೆದಿರುವ ರಹಸ್ಯ ಪತ್ರವೊಂದು ಇದೀಗ ಸೋರಿಕೆಯಾಗಿದ್ದು, ಪತ್ರದಲ್ಲಿ ಅಧಿಕಾರಿ ಇಟ್ಟಿರುವ ಬೇಡಿಕೆ ಮತ್ತು ಆಫರ್ ಗಳು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹೇಳುವ ವೀಡಿಯೋವೊಂದು ವೈರಲ್ ಆದ ನಂತರ ವಿವಾದಕ್ಕೆ ಸಿಲುಕಿದ್ದ ಹಿರಿಯ ಪೊಲೀಸ್ ಅಧಿಕಾರಿ ಸೂರ್ಯಕುಮಾರ್ ಶುಕ್ಲಾ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಇದೇ ಆಗಸ್ಟ್ 31ರಂದು ಅವರು ವೃತ್ತಿಯಿಂದ ನಿವೃತ್ತರಾಗಲಿದ್ದು, ತಮ್ಮ ನಿವೃತ್ತಿಯಾದ ಬಳಿಕ ತಮಗೆ ಸರ್ಕಾರ ನೀಡಬಹುದಾದ 4 ಹುದ್ದೆಗಳ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗಿದೆ. 
ಜುಲೈ 23ರಂದು ಈ ಪತ್ರವನ್ನು ಬರೆಯಲಾಗಿದ್ದು, ಈ ಪತ್ರ ಇದೀಗ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. ಪತ್ರದಲ್ಲಿ ಅಧಿಕಾರಿ ಶುಕ್ಲಾ ಅವರು, 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ತಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥ ಹುದ್ದೆಯನ್ನೂ ತನಗೆ ನೀಡಬಹುದು ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥ ಹುದ್ದೆಯನ್ನೂ ನೀಡಬಹುದೆಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಖಾಸಗಿ ವಾಹಿನಿ ಶುಕ್ಲಾರನ್ನು ಸಂಪರ್ಕಿಸಿದ್ದು, 'ನಿರ್ದಿಷ್ಟ ಪತ್ರಗಳನ್ನು ನಾನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ. ನಿವೃತ್ತಿಯ ನಂತರ ಪ್ರತಿಯೊಬ್ಬ ಅಧಿಕಾರಿಯೂ ರಾಜ್ಯಕ್ಕಾಗಿ ಸೇವೆ ಸಲ್ಲಿಸಲು ಬಯಸುವುದು ಸತ್ಯ. ಅಧಿಕಾರದಲ್ಲಿರುವ ಸರಕಾರಕ್ಕೆ ಈ ಬಗ್ಗೆ ಶಿಫಾರಸು ಸಲ್ಲಿಸುವುದರಲ್ಲಿ ತಪ್ಪೇನಿದೆ' ಎಂದವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!