ದೇಶ

ದೆಹಲಿ, ಗುರುಗಾವ್ ನಲ್ಲಿ ಧಾರಾಕಾರ ಮಳೆ: ರಸ್ತೆಗಳೆಲ್ಲಾ ಜಲಾವೃತ, ಟ್ರಾಫಿಕ್ ಜಾಮ್

Shilpa D
ನವದಹೆಲಿ: ದೆಹಲಿಯ ಹಲವು ಭಾಗಗಳಲ್ಲಿ ಇಂದು ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡಿದೆ, ಗುರುಗಾವ್ ನಲ್ಲೂ ಕೂಡ ಬೆಳ್ಳಂಬೆಳಗ್ಗೆ ಭಾರೀ ಮಳೆಯಾಗಿದೆ.
ರಸ್ತೆಗಳೆಲ್ಲಾ ನದಿಗಳಂತಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ  ಕೆಲವು ಫೋಟೋಗಳನ್ನು ಅಪ್ ಲೋಡ್ ಮಾಡಲಾಗಿದ್ದು, ಗುರುಗಾವ್ ನ  ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಸ್ತೆಗಳು ಜಲಾವೃತವಾದ ಹಿನ್ನೆಲೆಯಲ್ಲಿ  ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ,  ಇನ್ನೂ ದೆಹಲಿಯ ಹಲವು ರಸ್ತೆಗಳಲ್ಲೂ ಕೂಡ ಜಾಮ್ ಉಂಟಾಗಿದೆ.
ಗುರುವಾರದವರೆಗೂ ದೆಹಲಿಯಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೆಹಲಿ ವಿಮಾನ ನಿಲ್ದಾಣ, ಕೇಂದ್ರ ದೆಹಲಿ ಮತ್ತು ಆರ್ ಕೆ ಪುರಂ ಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ,  ಹಲವು ಪ್ರದೇಶಗಳಲ್ಲಿ ಮರಗಳು ಬಿದ್ದಿದ್ದು, ಮಳೆ ಗಾಳಿಗೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಿದೆ.
ನೋಯ್ಡಾ ಮತ್ತು ಗಾಜಿಯಾಬಾದ್ ಗಳಲ್ಲೂ ಮಳೆಯಾಗಿದೆ, ದೆಹಲಿಯಲ್ಲಿ ಆಗಸ್ಟ್ ತಿಂಗಳಲ್ಲಿಯೇ ಅತಿ ಹೆಚ್ಚು ಅಂದರೇ 49.6 ಮಿಮೀ  ಮಳೆಯಾಗಿದೆ, ಕಳೆದ ಮೂರು ವರ್ಷಗಳಲ್ಲಿ ಆತಿ ಹೆಚ್ಚಿನ ಮಳೆ ಇದಾಗಿದೆ.
SCROLL FOR NEXT