ಅಗರ್ತಲಾ: ಅಧಿಕೃತ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಅಧಿಕಾರಿಗಳು ಜೀನ್ಸ್ ಮತ್ತು ಕಾರ್ಗೋ ಪ್ಯಾಂಟ್ ಗಳನ್ನು ಧರಿಸುವುದನ್ನು ತಪ್ಪಿಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಈ ಸಂಬಂಧ ಕಂದಾಯ, ಶಿಕ್ಷಣ, ಮಾಹಿತಿ ಮತ್ತು ಸಂಸ್ಕೃತಿ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಸುಶೀಲ್ ಕುಮಾರ್ ಆಗಸ್ಟ್ 20 ರಂದು ಹೊರಡಿಸಿರುವ ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 2015 ರಂದು ಮಧ್ಯಪ್ರದೇಶದಲ್ಲಿಯೂ ಇಂತಹದ್ದೇ ಆದೇಶ ಹೊರಡಿಸಲಾಗಿದೆ. ಸಾರ್ವನಿಕ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಜೀನ್ಸ್ ಧರಿಸದಂತೆ ಆದೇಶಿಸಲಾಗಿದೆ.