ಮುಂಬೈ: ಪ್ರಸ್ತುತ ಆಡಳಿತ ಯುಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಲಿತರು, ಮತ್ತು ಬಡವರ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಕೀಲೆ ಸುಧಾ ಭಾರಾದ್ವಾಜ್ ಹೇಳಿದ್ದಾರೆ.
ನಿನ್ನೆ ದಿನ ಸುಧಾ ಭಾರಾದ್ವಾಜ್ ಸೇರಿದಂತೆ ಅನೇಕ ಎಡಪಂಥೀಯ ಧೋರಣೆವುಳ್ಳ ಹೋರಾಟಗಾರನ್ನು ಬಂಧಿಸಲಾಗಿತ್ತು. ಫಾರಿದಾಬಾದಿನ ನಿವಾಸದಲ್ಲಿ ನಿನ್ನೆ ಬಂಧಿಸಲಾಗಿದ್ದ ಸುಧಾ ಭಾರಾದ್ವಾಜ್ ಇಂದು ವಕೀಲರನ್ನು ಮಾತ್ರ ಭೇಟಿ ಮಾಡಲು ಪೊಲೀಸರು ಅವಕಾಶ ನೀಡಿದ್ದರು.
ದಲಿತರು, ಬುಡಕಟ್ಟು ಸಮುದಾಯದ ಹಕ್ಕು ಅಥವಾ ಮಾನವ ಹಕ್ಕುಗಳನ್ನು ವಿರೋಧಿಸುವವರು ಇದರ ಸುತ್ತ ಇರುವರೆಂಬುದು ನನ್ನ ಚಿಂತನೆಯಾಗಿದೆ. ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್ ಎಲ್ಲಾವನ್ನು ವಶಪಡಿಸಿಕೊಳ್ಳಲಾಗಿದೆ. ತಮ್ಮ ಜೀ- ಮೇಲ್, ಟ್ವೀಟರ್ ಫಾಸ್ ವರ್ಡ್ ಕೂಡಾ ಪಡೆಯಲಾಗಿದೆ ಎಂದು ಸುಧಾ ಭಾರಾದ್ವಾಜ್ ತಿಳಿಸಿದರು.
ಪ್ರಜಾಸತತ್ಮಕ ಹಕ್ಕುಗಳ ಮೇಲೆ ಲಜ್ಜೆಗೆಟ್ಟ ದಾಳಿ ಇದಾಗಿದ್ದು, ಕರಾಳ ತುರ್ತುಪರಿಸ್ಥಿತಿ ಸಂದರ್ಭ ನೆನಪಿಸುತ್ತದೆ ಎಂದು ಸುಧಾ ಭಾರಾದ್ವಾಜ್ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ದಾಳಿ ನಡೆಸಿದ ಸಂದರ್ಭ ಬಂದಿದ್ದ 10 ಪೊಲೀಸರಲ್ಲಿ ಹರಿಯಾಣದ ಕೇವಲ ಒಬ್ಬರೇ ಮಾತ್ರ ಮಹಿಳಾ ಕಾನ್ಸ್ ಟೇಬಲ್ ಇದ್ದರು. ಉಳಿದವರು ಮಹಾರಾಷ್ಟ್ರ ಪೊಲೀಸರು. ಸುಧಾ ಭಾರಾದ್ವಾಜ್ ಸರ್ಜ್ ವಾರೆಂಟ್ ಕೇಳಿದ್ದಾಗ ಅವರ ಬಳಿ ಇರಲಿಲ್ಲ ಎಂದು ಸುಧಾ ಭಾರಾದ್ವಾಜ್ ಪುತ್ರಿ ಅನು ಭಾರಾದ್ವಾಜ್ ತಿಳಿಸಿದರು.
ಪೊಲೀಸರು ಇನ್ನಿತರ ಕೆಲ ದಾಖಲೆಗಳನ್ನು ಹೊಂದಿದ್ದರಿಂದ ಮನೆ ಒಳಗಡೆ ಬರಲು ತಮ್ಮ ತಾಯಿ ಅವಕಾಶ ಮಾಡಿಕೊಟ್ಟರು . ಆರೋಪಗಳ ಬಗ್ಗೆ ನನ್ನಗೆ ಏನೂ ಗೊತ್ತಿಲ್ಲ. ಆದರೆ, ಪುಣೆಗೆ ಸಂಬಂಧಿಸಿದ ವಿಷಯದಲ್ಲಿ ಬಂಧನಕ್ಕೆ ಬಂದಿರುವುದಾಗಿ ತಮ್ಮ ತಾಯಿ ತಿಳಿಸಿದರು ಎಂದು ಅನು ಭಾರಾದ್ವಾಜ್ ಹೇಳಿದರು.
ನಕ್ಸಲ್ ಜೊತೆಗೆ ನಂಟಿನ ಆರೋಪದ ಮೇರೆಗೆ ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾಮಾಜಿಕ ಹೋರಾಟಗಾರರ ಮನೆಗಳ ಮೇಲೆ ಪುಣೆ ಪೊಲೀಸರು ದಾಳಿ ನಡೆಸಿ ಸುಧಾ ಬಾರಾದ್ವಾಜ್ ಸೇರಿದಂತೆ ಹಲವರನ್ನು ಬಂಧಿಸಿದ್ದರು.