ದೇಶ

ಭೀಮಾ-ಕೊರೆಗಾಂವ್ ಹಿಂಸೆ; ಬಂಧಿತ ಮೂವರು ಕಾರ್ಯಕರ್ತರನ್ನು ಪುಣೆಗೆ ಕರೆತಂದ ಪೊಲೀಸರು

Sumana Upadhyaya

ಪುಣೆ: ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿರುವ ಶಂಕೆಯಿಂದ ನಿನ್ನೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದ ದೇಶದ ಪ್ರಮುಖ ಎಡಪಂಥೀಯ ಐವರು ಕಾರ್ಯಕರ್ತರಲ್ಲಿ ಮೂವರನ್ನು ಕಳೆದ ತಡರಾತ್ರಿ ಪುಣೆ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ತೆಲುಗು ಕವಿ ವರವರ ರಾವ್, ಕಾರ್ಯಕರ್ತ ವೆರ್ನನ್ ಗೊನ್ಸಲ್ವ್ಸ್ ಮತ್ತು ಅರುಣ್ ಫೆರ್ರೈರಾ ಅವರನ್ನು ಕರೆತರಲಾಗಿದ್ದು ಇಂದು ಸಂಜೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸುವ ಸಾಧ್ಯತೆಯಿದೆ.

ಪುಣೆಯಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿಯೇ ವರವರ ರಾವ್ ಅವರ ಹೈದರಾಬಾದ್ ನಿವಾಸ, ಮುಂಬೈನಲ್ಲಿ ಗೊನ್ಸಾಲ್ವ್ಸ್ ಮತ್ತು ಫೆರೀರಾ ಮನೆ, ವ್ಯಾಪಾರ ಒಕ್ಕೂಟ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರ ಫರೀದಾಬಾದ್ ನ ನಿವಾಸ ಮತ್ತು ಗೌತಮ್ ನವಲಖ ಅವರ ದೆಹಲಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT