ದೇಶ

ನಕ್ಸಲ್ ಜೊತೆ ನಂಟು ಆರೋಪ: ಸರ್ಕಾರ ಸಾಕ್ಷ್ಯಧಾರ ಒದಗಿಸುವಂತೆ ಜೆಡಿಯು ಆಗ್ರಹ

Nagaraja AB

ನವದೆಹಲಿ :  ನಕ್ಸಲ್ ಜೊತೆ  ಸಂಪರ್ಕದ ಶಂಕೆಯ ಮೇರೆಗೆ  ಪುಣೆಯ ಪೊಲೀಸರು ಹಲವೆಡೆ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿರುವುದು ಇದೀಗ ಎನ್ ಡಿಎ ಮೈತ್ರಿ ಪಕ್ಷ ಜೆಡಿಯು ಅಸಮಾಧಾನಕ್ಕೆ ಕಾರಣವಾಗಿದೆ.

ನಕ್ಸಲ್ ಚಟುವಟಿಕೆ ಆರೋಪದ ಮೇಲೆ  ಕ್ರಮ ಕೈಗೊಳ್ಳುವ ಮುಂಚೆ ಸರ್ಕಾರ ಆರೋಪಕ್ಕೆ ತಕ್ಕಂತೆ ಸೂಕ್ತ ಸಾಕ್ಷ್ಯಧಾರಗಳನ್ನು ಒದಗಿಸಬೇಕೆಂದು  ಜೆಡಿಯು ಆಗ್ರಹಿಸಿದೆ.

ಸಾಕ್ಷ್ಯಧಾರ ಒದಗಿಸದೆ ಈ ರೀತಿಯ ಕ್ರಮ ಕೈಗೊಳ್ಳುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡಂತಾಗುತ್ತದೆ ಎಂದು ಜೆಡಿಯು ಮುಖಂಡ ಪವನ್ ವರ್ಮಾ ಹೇಳಿದ್ದಾರೆ.

ಸೂಕ್ತ ಸಾಕ್ಷ್ಯಧಾರ ಒದಗಿಸುವಲ್ಲಿ ಸರ್ಕಾರ ವಿಫಲವಾದ್ದಲ್ಲಿ  ಇಂತಹ ಕ್ರಮ ನನ್ನಲ್ಲಿ ಭಯ ಮೂಡಿಸುತ್ತದೆ.  ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏನೂ ಸಂಭವಿಸುತ್ತೋ ಅಂತಹ ಪರಿಸ್ಥಿತಿಯ ವಿರುದ್ಧ ಎಲ್ಲರೂ ಸರ್ವಾನುಮತದಿಂದ ಧ್ವನಿ ಎತ್ತಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT