ದೇಶ

ಬಿಹಾರ ಸ್ಥಾನ ಹಂಚಿಕೆ ಲೆಕ್ಕಾಚಾರ ಮುಂದಿಟ್ಟ ಬಿಜೆಪಿ: ಜೆಡಿಯು ಅಸಮಾಧಾನ

Srinivas Rao BV
ಪಾಟ್ನಾ: 2019 ರ ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಸ್ಥಾನ ಹಂಚಿಕೆ ಲೆಕ್ಕಾಚಾರವನ್ನು ಬಿಜೆಪಿ ಮುಂದಿಟ್ಟಿದೆ. 
ಬಿಹಾರದ 40 ಸ್ಥಾನಗಳ ಪೈಕಿ ಅತಿ ಹೆಚ್ಚು 20  ಸ್ಥಾನಗಳನ್ನು ತನ್ನ ಬಳಿ ಇಟ್ಟುಕೊಂಡು 12 ಸ್ಥಾನಗಳನ್ನು ಜೆಡಿಇಯುಗೆ ನೀಡುವ ಪ್ರಸ್ತಾವನೆ ಹೊರಹಾಕಿದೆ. ಉಳಿದ ಸ್ಥಾನಗಳು ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿ, ಉಪೇಂದ್ರ ಕುಶ್ವಾ ಅವರ ಪಕ್ಷಕ್ಕೆ ಹಂಚಿಕೆಯಾಗಲಿದೆ. 
ಬಿಜೆಪಿಯ ಈ ಪ್ರಸ್ತಾವನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಯು, ಗೌರವಯುತವಾದ ಹಂಚಿಕೆಯ ಪ್ರಸ್ತಾವನೆಯಲ್ಲ ಎಂದು ಹೇಳಿದೆ. ಇದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂಬುದು ಬಿಜೆಪಿಗೂ ಗೊತ್ತಿದೆ, ಎರಡೂ ಪಕ್ಷಗಳ ನಡುವೆ ಸಮಾನ ಹಂಚಿಕೆಯಾಗಬೇಕು ಎರಡೂ ಪಕ್ಷಗಳಿಗೆ ತಲಾ 17 ಸ್ಥಾನಗಳು ಹಂಚಿಕೆಯಾಗಬೇಕು ಹಾಗೂ ಉಳಿದ 6 ಸ್ಥಾನಗಳನ್ನು ರಾಮ್ ವಿಲಾಸ್ ಪಾಸ್ವಾನ್ ಹಾಗೂ ಉಳಿದ ಮೈತ್ರಿ ಪಕ್ಷಗಳ ನಡುವೆ ಹಂಚಿಕೆಯಾಗಬೇಕು ಎಂದು ಜೆಡಿಯು ನಾಯಕರು ಹೇಳಿದ್ದಾರೆ. 
ಆದರೆ ಬಿಜೆಪಿ ನಾಯಕರ ಪ್ರಕಾರ ಇದು ಅಂತಿಮವಾದ ನಿರ್ಧಾರವಲ್ಲ, "ಇನ್ನೂ ಏನು ಅಂತಿಮಗೊಂಡಿಲ್ಲ, ಶೀಘ್ರವೇ ಅಂತಿಮಗೊಳಿಸಲಾಗುತ್ತದೆ ಎಂದು ಬಿಜೆಪಿ ನಾಯಕ ಭುಪೇಂದ್ರ ಯಾದವ್ ಹೇಳಿದ್ದಾರೆ.
SCROLL FOR NEXT