ದೇಶ

ವಿಶ್ವಸಂಸ್ಥೆ ಸಾಮಾನ್ಯ ಸಭೆ : ಭಾರತ- ಪಾಕಿಸ್ತಾನ ನಡುವೆ ಮಾತುಕತೆ ಇಲ್ಲ

Nagaraja AB

ನವದೆಹಲಿ: ಮುಂದಿನ ತಿಂಗಳು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಭಾಗವಾಗಿ ವಿದೇಶಾಂಗ ಸಚಿವೆ ಸುಷ್ಮಾ  ಸ್ವರಾಜ್ , ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಶಹಾ ಮಹಮ್ಮೊದ್  ಖುರೇಷಿಯೊಂದಿಗೆ ಯಾವುದೇ ದ್ವೀಪಕ್ಷೀಯ ಮಾತುಕತೆ  ನಡೆಸುವ ಯೋಚನೆ ಇಲ್ಲ ಎಂಬುದು ತಿಳಿದುಬಂದಿದೆ.

ಮುಂದಿನ ತಿಂಗಳು  ನ್ಯೂಯಾರ್ಕ್ ನಲ್ಲಿ ಸುಷ್ಮಾ ಸ್ವರಾಜ್,  ಖುರೇಷಿ ಮಾತುಕತೆ ನಡೆಸಲಿದ್ದಾರೆ  ಎಂಬಂತಹ ವರದಿಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ಎಂಬಂತೆ  ಯಾವುದೇ ದ್ವಿಪಕ್ಷೀಯ ಮಾತುಕತೆ ಇಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಯಾವುದೇ ಮಾತುಕತೆಗೂ ಮುಂಚಿತವಾಗಿ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಾರತ ಸರ್ಕಾರ ಬಯಸಿತ್ತು.  2016ರಲ್ಲಿ ಉರಿ  ಹಾಗೂ ಪಠಾಣ್ ಕೊಟ್  ವಾಯು ನೆಲೆ ಮೇಲೆ ಭಯೋತ್ಪಾದಕರ ದಾಳಿಗೆ ಪಾಕಿಸ್ತಾನದಿಂದ ಕ್ರಮವನ್ನು ಭಾರತ ಕಾಯುತ್ತಿದೆ. ಇದರ ಹೊರತಾಗಿಯೂ 26/11 ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ನ್ಯಾಯಕ್ಕೂ ಭಾರತ ಕಾಯುತ್ತಿದೆ.

ಕಳೆದ 10 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಈ ಪ್ರಕರಣವನ್ನು ತ್ವರಿತ  ವಿಚಾರಣೆ ನಡೆಸಬೇಕೆಂದು ಪಾಕಿಸ್ತಾನವನ್ನು ಭಾರತ ಕೇಳಿದೆ.

SCROLL FOR NEXT