ದೇಶ

ಚೌ ಶವದ ಹುಡುಕಾಟ ಕಾರ್ಯಾಚರಣೆ ಕೈಬಿಡಿ, ಶವ ಸಿಗುವುದಿಲ್ಲ: ಮಾನವ ಶಾಸ್ತ್ರಜ್ಞರು

Srinivasamurthy VN
ನವದೆಹಲಿ: ಅಂಡಮಾನ್‌- ನಿಕೋಬಾರ್‌ನಲ್ಲಿನ ಸೆಂಟಿನೆಲ್‌ ದ್ವೀಪದಲ್ಲಿರುವ ಆದಿವಾಸಿಗಳ ಮತಾಂತರಕ್ಕೆ ಯತ್ನಿಸಿ ಅವರ ಬಾಣದ ದಾಳಿಗೆ ಬಲಿಯಾದ ಅಮೆರಿಕನ್‌ ಮತ ಪ್ರಚಾರಕ ಜಾನ್ ಅಲೆನ್ ಚೌನ ಶವ ಸಿಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.
ಚೌ ಶವದ ಹುಡುಕಾಟ ಕಾರ್ಯಾಚರಣೆಯನ್ನು ಕೂಡಲೇ ಸ್ಥಳೀಯ ಜಿಲ್ಲಾಡಳಿತ ಕೈ ಬಿಡಬೇಕು. ಇದರಿಂದ ಅಪಾಯ ಹೆಚ್ಚು ಎಂದು ಮಾನವ ಶಾಸ್ತ್ಪಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶವದ ಹುಡುಕಾಟದ ಕಾರ್ಯಾಚರಣೆಯಿಂದ ಸೆಂಟಿನೆಲ್ ಬುಡಕಟ್ಟು ನಿವಾಸಿಗಳಿಗೆ ತೊಂದರೆಯಾಗುತ್ತದೆ. ಅವರಿಗೆ ತೊಂದರೆಯಾದರೆ ಖಂಡಿತಾ ಅವರು ಆಕ್ರೋಶಗೊಂಡು ದಾಳಿ ಮಾಡುತ್ತಾರೆ. ಇದರಿಂದ ಅಪಾಯವೇ ಹೆಚ್ಚು ಎಂದು ಮಾನವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. 
ಅಲ್ಲದೆ ಚೌ ಸಾವನ್ನಪ್ಪಿ ಸುಮಾರು 18 ದಿನಗಳೇ ಕಳಿದಿದ್ದು, ಇಷ್ಟು ಹೊತ್ತಿಗಾಗಲೇ ಬುಡುಕಟ್ಟು ನಿವಾಸಿಗಳು ತಮ್ಮದೇ ಆದ ರೀತಿಯಲ್ಲಿ ಶವವನ್ನು ನಿರ್ವಹಿಸಿರುತ್ತಾರೆ. ಹೀಗಾಗಿ ಚೌ ಶವದ ಹುಡುಕಾಟ ಬೇಡ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಂಡಮಾನ್ ಅಧಿಕಾರಿಯೊಬ್ಬರು, ಹೊರ ಜಗತ್ತಿನ ಸಂಪರ್ಕಕ್ಕೆ ಬಾರದೇ ಪುಟ್ಟದ್ವೀಪದಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳಿರುವ ಸ್ಥಳಕ್ಕೆ ಹೋಗಿ ಮತ ಪ್ರಚಾರಕ ಜಾನ್‌ ಅಲೆನ್‌ ಚಾವು ದೇಹ ತರಬೇಕು. ಆದರೆ ಅದೊಂದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಆ ದ್ವೀಪದ ಸುತ್ತಳತೆಯ 5 ಕಿ.ಮೀ. ಒಳಕ್ಕೆ ಯಾರೂ ಹೋಗಬಾರದು ಎಂಬ ನಿರ್ಬಂಧ ಇರುವುದರಿಂದ ಕಾರ್ಯಾಚರಣೆ ಅಷ್ಟುಸುಲಭವಿಲ್ಲ. ಹೋದರೂ ಆದಿವಾಸಿಗಳು ದಾಳಿ ಮಾಡುತ್ತಾರೆ. ವಿಳಂಬ ಮಾಡಿದರೆ, ತಮ್ಮದೇ ರೀತಿಯಲ್ಲಿ ಶವವನ್ನು ಅಂತ್ಯಸಂಸ್ಕಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
SCROLL FOR NEXT