ಸಂಗ್ರಹ ಚಿತ್ರ 
ದೇಶ

ತಮಿಳುನಾಡಿದನಲ್ಲಿ ಭೀಕರ ಅಪಘಾತ: ಬೆಂಗಳೂರು ಮೂಲದ ನಾಲ್ವರು ಸಾವು

ತಮಿಳುನಾಡಿನಲ್ಲಿ ರಸ್ತೆಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರ್ಣಾಮ ಬೆಂಗಳೂರಿನ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದಿಂಡಿಗಲ್ ನಲ್ಲಿ ನಡೆದಿದೆ.

ಮಧುರೈ: ತಮಿಳುನಾಡಿನಲ್ಲಿ ರಸ್ತೆಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರ್ಣಾಮ ಬೆಂಗಳೂರಿನ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದಿಂಡಿಗಲ್ ನಲ್ಲಿ ನಡೆದಿದೆ.
ಭಾನುವಾರ ಬೆಳಗ್ಗಿನ ಜಾವ ನಡೆದ ಘಟನೆಯಲ್ಲಿ ಹರಿಬಾಬು (26), ಹರೀಶ್‌(24), ಲೋಕೇಶ್‌ (28) ಹಾಗೂ ಕಾರಿನ ಚಾಲಕ ಮಂಜುನಾಥ್‌ ಮರಣ ಹೊಂದಿದ್ದಾರೆ.
ಇದರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆಚಾಲಕ ಮಂಜುನಾಥ್ ಆಸ್ಪತ್ರೆಯಲ್ಲಿ ನಿಧನರಾದರು.ದಿಂಡಿಗಲ್‌ ಬಳಿಯ ಥಡಿಕೊಂಬುವಿನಲ್ಲಿ ಅಪಘಾತ ನಡೆದಿದ್ದು ಇವರೆಲ್ಲರೂ ಗೆಳೆಯನ ಮದುವೆಗಾಗಿ ವಿರುಧುನಗರ್ ಜಿಲ್ಲೆಯ ಅರುಪ್ಪುಕೊಟ್ಟಾಯ್‌ ಗೆ ತೆರಳುತ್ತಿದ್ದರು.
ಶನಿವಾರ ರಾತ್ರಿ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದ ಕಾರ್ ಚಾಲಕನಿಗೆ ಕಾರು ಚಾಲನೆ ಮಾಡುವಾಗಲೇ ನಿದ್ದೆ ಬಂದಿದ್ದು ಇದರಿಂದ ರಸ್ತೆ ಬದಿ ಲಾರಿ ನಿಂತದ್ದು ಗುರುತಿಸದೆ ಅಪಘಾತವಾಗಿದೆ.
ಅಪಘಾತಕ್ಕೀಡಾದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಘಟನೆ ಸಂಬಂಧ ಥಡಿಕೊಂಬು ಪೊಲೀಸರು ಪ್ರಾರಣ ದಾಖಲಿಸಿಕೊಂಡಿದ್ದಾರೆ.
ಕಾರ್ ನೊಂದಣಿ ಸಂಖ್ಯೆ, ಸ್ಥಳದಲ್ಲಿ ಸಿಕ್ಕ ಲಗ್ನಪತ್ರಿಕೆ ಇತರೆ ಮಾಹಿತಿಯ ಆಧಾರದಲ್ಲಿ ತಮಿಳುನಾಡು ಪೋಲೀಸರು ಬೆಂಗಳೂರು ಬಸವೇಶ್ವರ ನಗರ ಪೋಲೀಸರಿಗೆ ಸಹ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?