ದೇಶ

ಬೋಧನಾ ಸಿಬ್ಬಂದಿಗಳಿಲ್ಲದೆ ಸಂಕಷ್ಟದಲ್ಲಿ ನಡೆಯುತ್ತಿದೆ ದೇಶದ 8 ಐಐಟಿ ಸಂಸ್ಥೆಗಳು

Manjula VN
ನವದೆಹಲಿ: ಬೋಧನಾ ಸಿಬ್ಬಂದಿಗಳಿಲ್ಲದೆ ದೇಶದ 8 ಐಐಟಿ ಸಂಸ್ಥೆಗಳು ಸಂಕಷ್ಟದಲ್ಲಿ ನಡೆಯುತ್ತಿದ್ದು, ಶೇ.36 ರಷ್ಟು ಹುದ್ದೆಗಳು ಖಾಲಿಯಿದ್ದರೂ, ಹುದ್ದೆಗಳನ್ನು ಭರ್ತಿ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಇದೀಗ ಬಹಿರಂಗಗೊಂಡಿದೆ. 
ಮುಂಬೈ, ದೆಹಲಿ, ಗುವಾಹಟಿ, ಕಾನ್ಪುರ, ಖರಗ್ಪುರ, ಚೆನ್ನೈ, ರೂರ್ಕಿ ಮತ್ತು ವಾರಣಾಸಿಯಲ್ಲಿರುವ ಐಐಟಿ ಸಂಸ್ಥೆಗಳಲ್ಲಿ ಒಟ್ಟು 65,824 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹುದ್ದೆಗೆ ತೆಗೆದುಕೊಂಡಿರುವ 6,318 ಶಿಕ್ಷಕರಲ್ಲಿ ಇದೀಗ ಕೇವಲ 4,049 ಶಿಕ್ಷಕರಿರುವುದಾಗಿ ತಿಳಿದುಬಂದಿದೆ. 
ಆರ್'ಟಿಐ ಹೋರಾಟಗಾರ ಚಂದ್ರಶೇಖರ್ ಗೌಡ್ ಅವರ ಪ್ರಶ್ನೆಗೆ ಉತ್ತರಿಸಿರುವ ಮಾನವ ಸಂಪನ್ಮೂಲ ಸಚಿವಾಲಯ, ಐಐಟಿಯಲ್ಲಿ ಪ್ರಸ್ತುತ 16 ವಿದ್ಯಾರ್ಥಿಗಳಿಗೆ ಒಬ್ಬೊಬ್ಬ ಶಿಕ್ಷಕರಿರುವುದಾಗಿ ಪ್ರತಿಕ್ರಿಯೆ ನೀಡಿದೆ. 
ವಾರಣಾಸಿಯ ಐಐಟಿಯಲ್ಲಿ ಶೇ.52 ರಷ್ಟು ಹುದ್ದೆಗಳಿದ್ದು, ಬೋಧನಾ ವಿಭಾಗದಲ್ಲಿ 548 ಅನಮೋದಿತ ಹುದ್ದೆಗಳ ಪೈಕಿ ಕೇವಲ 265 ಶಿಕ್ಷಕರು ಮಾತ್ರ ಹುದ್ದೆಯಲ್ಲಿದ್ದಾರೆಂದು ತಿಳಿಸಿದೆ. 
ವಾರಣಾಸಿ ಐಐಟಿಯಲ್ಲಿ 5,485 ವಿದ್ಯಾರ್ಥಿಗಳಿದ್ದಾರೆ. ದೇಶದಲ್ಲಿರುವ ಐಐಟಿಗಳ ಸಂಖ್ಯೆ ಇದೀಗ 23ಕ್ಕೆ ಏರಿಕೆಯಾಗಿದ್ದು, ದೇಶದ ಅತ್ಯಂತ ಹಳೆಯ 8 ಐಐಟಿಗಳಲ್ಲಿ ಈಗಲು ಶಿಕ್ಷಕರ ಕೊರತೆಯಿದೆ ಎಂದು ಶಿಕ್ಷಣ ತಜ್ಞೆ ಜಯಂತಿಲಾಲ್ ಭಂಡಾರಿಯವರು ಹೇಳಿದ್ದಾರೆ. 
SCROLL FOR NEXT