ನವದೆಹಲಿ: ಯುಪಿಎ ಅಧಿನಾಯಕಿ ಸೋನಿಯಾಗಾಂಧಿ ಅವರ ಆಳಿಯ ರಾಬರ್ಟ್ ವಾದ್ರಾ ಸಹಚರರ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ ನಂತರ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ.
ಜನರನ್ನು ಭೀತಿಗೊಳಿಸುವ ರೀತಿಯಲ್ಲಿ ಮೋದಿ ಏನೆಲ್ಲಾ ತಂತ್ರಗಳನ್ನು ಅನುಸರಿಸಿದ್ದರೂ ಬಿಜೆಪಿ ಆಡಳಿತವಿದ್ಧ ರಾಜ್ಯಗಳಲ್ಲಿಯೇ ಸೋಲಿನ ಭೀತಿ ಆವರಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಸಂವಿಧಾನ ಜಾರಿಯಾದ ನಂತರ ಇಂತಹ ಟೆರರ್ ರಾಜ್ಯವನ್ನು ನೋಡಿರಲಿಲ್ಲ ಎಂದು ಆರೋಪಿಸಿದರು.ಬ್ರಿಟಿಷ್ ರಾಜ್ ವಿರುದ್ಧ ಹೋರಾಟ ನಡೆಸಿದ್ದು, ಮತ ಎಣಿಕೆ ದಿನ ಬಿಜೆಪಿಗೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಹಾಗೂ ಅದರ ಮೌಲ್ಯಗಳಿಂದ ಭಯಭೀತರಾಗಿದ್ದು, ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಪಕ್ಷದ ನಾಯಕರು ಅಥವಾ ಅವರ ಸಹಚರರ ವಿರುದ್ಧ ಅತ್ಯುನ್ನತ ತಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವೇ ತಕ್ಕ ಉತ್ತರವಾಗಲಿದೆ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.