ಬ್ರಿಟಿಷ್ ಮೂಲದ ಭಾರತೀಯ ಲೇಖಕ ರಸ್ಕಿನ್ ಬಾಂಡ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ವಚ್ಛ ಭಾರತ ಯೋಜನೆಯ ನಂತರ ಭಾರತ ಹಿಂದೆಂದಿಗಿಂತಲೂ ಸ್ವಚ್ಛವಾಗಿದೆ ಎಂದು ಹೇಳಿದ್ದಾರೆ.
ಸಾಹಿತ್ಯ ವಲಯದಲ್ಲಿ ಖ್ಯಾತಿ ಪಡೆದಿರುವ ರಸ್ಕಿನ್ ಬಾಂಡ್, ಟಾಟಾ ಸ್ಟೀಲ್ ಜಾರ್ಖಂಡ್ ಸಾಹಿತ್ಯ ಸಭೆಯ(ಜೆಎಲ್ಎಂ) ನಲ್ಲಿ ಭಾಗವಹಿಸಿ ಮಾತನಾಡಿದ್ದು, ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಹಲವು ನಗರಗಳು ಹಿಂದೆ ಇದ್ದದ್ದಕ್ಕಿಂತಲೂ ಸ್ವಚ್ಛವಾಗಿವೆ. ಆದರೆ ಜನರು ಬೇಗ ತಮ್ಮ ಹಿಂದಿನ ಅಭ್ಯಾಸಗಳನ್ನು ಮತ್ತೆ ಪ್ರಾರಂಭಿಸುತ್ತಾರೆ, ಸಂಪೂರ್ಣವಾಗಿ ಅದನ್ನು ಬದಲಾವಣೆ ಮಾಡಲು ಸಮಯಾವಕಾಶ ಬೇಕಾಗುತ್ತದೆ ಎಂದು ರಸ್ಕಿನ್ ಬಾಂಡ್ ಅಭಿಪ್ರಾಯಪಟ್ಟಿದ್ದಾರೆ.