ನವದೆಹಲಿ: 2019 ರ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ರಾಷ್ಟೀಯ ಪಿಂಚಣಿ ಯೋಜನೆಗೆ ಸರ್ಕಾರದಿಂದ ನೀಡಲಾಗುವ ಮೊತ್ತವನ್ನು ಶೇ.14 ಕ್ಕೆ ಏರಿಕೆ ಮಾಡಿದೆ.
ಬೇಸಿಕ್ ಸ್ಯಾಲರಿಯ ಪಿಂಚಣಿಗೆ ಶೇ.10 ರಷ್ಟಿದ್ದ ಸರ್ಕಾರದ ಕೊಡುಗೆಯನ್ನು ಈಗ ಶೇ.14 ಕ್ಕೆ ಏರಿಕೆ ಮಾಡಲಾಗಿದ್ದು, ಹಣ ಹಿಂತೆಗೆತಕ್ಕೆ ತೆರಿಗೆ ವಿನಾಯ್ತಿ ನೀಡಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಕೇಂದ್ರ ಸಚಿವ ಸಂಪುಟದ ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 2,840 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದ್ದು, ಒಟ್ಟು 36 ಲಕ್ಷ ಜನರಿಗೆ, ಎನ್ ಪಿಎಸ್ ವ್ಯಾಪ್ತಿಗೆ ಬರುವ ಅಂದಾಜು 18 ಲಕ್ಷ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದ್ದು ಚುನಾವಣೆ ವೇಳೆ ಸಹಕಾರಿಯಾಗಲಿದೆ.