ಗ್ರಾಹಕರಿಗೆ ಎಂಜಲು ಊಟ: ಪಾರ್ಸೆಲ್ ಬಿಚ್ಚಿ ತಿಂದ ಜೋಮ್ಯಾಟೋ ಡೆಲಿವೆರಿ ಬಾಯ್, ವಿಡಿಯೋ ವೈರಲ್!
ಮನೆಯಲ್ಲಿ ಅಡುಗೆ ಮಾಡದೇ ಮೊಬೈಲ್ ಆ್ಯಪ್ ಮೂಲಕ ಫುಡ್ ಗೆ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ. ಫುಡ್ ಡೆಲಿವರಿ ಸೇವೆ ಸಲ್ಲಿಸುವ ಜೋಮ್ಯಾಟೋದ ಡೆಲಿವೆರಿ ಬಾಯ್ ಪಾರ್ಸೆಲ್ ಬಿಚ್ಚಿ ತಿಂದಿರುವ...
ಮನೆಯಲ್ಲಿ ಅಡುಗೆ ಮಾಡದೇ ಮೊಬೈಲ್ ಆ್ಯಪ್ ಮೂಲಕ ಫುಡ್ ಗೆ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ. ಫುಡ್ ಡೆಲಿವರಿ ಸೇವೆ ಸಲ್ಲಿಸುವ ಜೋಮ್ಯಾಟೋದ ಡೆಲಿವೆರಿ ಬಾಯ್ ಪಾರ್ಸೆಲ್ ಬಿಚ್ಚಿ ತಿಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಜೋಮ್ಯಾಟೋದ ಡೆಲಿವೆರಿ ಬಾಯ್ ರಸ್ತೆ ಬದಿ ತಮ್ಮ ಬೈಕ್ ಅನ್ನು ನಿಲ್ಲಿಸಿ ಡೆಲಿವರಿ ಮಾಡಲು ತಂಡಿದ್ದ ಆಹಾರದ ಪೊಟ್ಟಣವನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ಸ್ವಲ್ಪ ಸ್ವಲ್ಪ ಸೇವಿಸಿ ಮತ್ತೆ ಪೊಟ್ಟಣವನ್ನು ಮುಚ್ಚಿಟ್ಟಿದ್ದಾನೆ. ಇದನ್ನು ಯಾರೋ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಜೋಮ್ಯಾಟೋ ಈ ಕುರಿತು ಟ್ವೀಟ್ ಮಾಡಿ ಗ್ರಾಹಕರ ಆತ್ಮತೃಪ್ತಿಗೆ ನಮ್ಮ ಆದ್ಯತೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಇನ್ನು ಮುಂದೆ ಈ ರೀತಿ ನಡೆಯದಂತೆ ಎಚ್ಚರವಹಿಸುವುದಾಗಿ ಟ್ವೀಟಿಸಿದ್ದಾರೆ.
ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಗುರ್ಗಾಮ್/ನೋಯ್ಡಾ ಮತ್ತು ಪುಣೆಯಲ್ಲಿ ಜೋಮ್ಯಾಟೋ ಫುಡ್ ಡೆಲಿವರಿ ಮಾಡುತ್ತಿದೆ.
This is what happens when you use coupon codes all the time.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.