ಹೈದರಾಬಾದ್: ತೆಲಂಗಾಣ ರಾಜ್ಯದ ನೂತನ ಸಿಎಂ ಆಗಿ ಕೆ ಚಂದ್ರಶೇಖರ ರಾವ್ ಅವರು ಇದೇ ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಟಿಆರ್ ಎಸ್ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದೇ ಗುರುವಾರ ಟಿಆರ್ ಎಸ್ ಅಧಿನಾಯಕ ಕೆ ಚಂದ್ರಶೇಖರ ರಾವ್ ಅವರು 2ನೇ ಬಾರಿಗೆ ತೆಲಂಗಾಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೆಸಿಆರ್ ನೇತೃತ್ವದ ಟಿಆರ್ಎಸ್ 88 ಸ್ಥಾನಗಳನ್ನು ಗೆದ್ದು ಬೀಗಿತ್ತು.
ಮಂಗಳವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಟಿಆರ್ ಎಸ್ ಪ್ರಚಂಡ ಜಯ ಸಾಧಿಸಿತ್ತು. ಕೆಸಿಆರ್ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಗುರುವಾರಕ್ಕೆ ಪ್ರಮಾಣವಚನವನ್ನು ಮುಂದೂಡಿದ್ದಾರೆ ಎಂದು ಹೇಳಲಾಗಿದೆ.