ಚೆನ್ನೈ: ತಮಿಳುನಾಡು ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಇಳಿಕೆಯಾದರೆ, ನ್ಯಾಯಾಲಯದ ಮೊರೆ ಹೋಗುತ್ತೇನೆಂದು ತಮಿಳು ನಟ ಹಾಗೂ ರಾಜಕಾರಣಿ ರಜನೀಕಾಂತ್ ಅವರು ಹೇಳಿದ್ದಾರೆ.
ಕರ್ನಾಟಕ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲು ಯೋಜಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆ ಕುರಿತಂತೆ ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್ ಅವರು, ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಹಾನಿ ಇಲ್ಲ ಎಂಬ ಕರ್ನಾಟಕ ರಾಜ್ಯದ ಹೇಳಿಕೆ ನಿಜವೇ ಎಂದು ಪರಿಶೀಲಿಸಬೇಕು. ಯೋಜನೆಯಿಂದಾಗಿ ತಮಿಳುನಾಡು ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದೇ ಆದರೆ, ನ್ಯಾಯಾಲಯದ ಮೊರೆ ಹೋಗುತ್ತೇನೆಂದು ಹೇಳಿದ್ದಾರೆ.
ಈ ನಡುವೆ ಮೇಕೆದಾಟು ಅಣೆಕಟ್ಟು ನಿರ್ಮಾಣದ ಕುರಿತು ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕಕ್ಕೆ ನೀಡಲಾದ ಅನುಮತಿ ವಾಪಸ್ ಪಡೆಯಬೇಕೆಂದು ಒತ್ತಾಯಿಸಿಸುವ ನಿರ್ಣಯಕ್ಕಾಗಿ ಪುದುಚೇರಿಯಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ.