ಚೆನ್ನೈ: ಐಐಟಿ ಮದ್ರಾಸ್ ವಿವಾದಾತ್ಮ ನಿರ್ಧಾರವೊಂದು ತೆಗೆದುಕೊಂಡಿದ್ದು, ಮೆಸ್ ನಲ್ಲಿ ವೆಜ್ ಮತ್ತು ನಾನ್-ವೆಜ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಾಗಿಲು, ಪಾತ್ರೆ ಹಾಗೂ ಕೈತೊಳೆಯುವ ಸ್ಥಳ ನಿಗದಿಪಡಿಸಿದೆ.
ಈ ನಿರ್ಧಾರದ ವಿರುದ್ಧ ಕೆಲ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು 'ಅಸ್ಪೃಶ್ಯತೆ' ಎಂದು ಕರೆದಿದ್ದಾರೆ.
ಐಐಟಿ ಮದ್ರಾಸ್ ನ ವಿದ್ಯಾರ್ಥಿ ಸಂಘ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್(ಎಪಿಎಸ್ ಸಿ), ಹಿಮಾಲಯ ಮೆಸ್ ನಲ್ಲಿ ವೆಜ್ ಮತ್ತು ನಾನ್ -ವೆಜ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಾಗಿಲು ಮತ್ತು ಕೈ ತೊಳೆಯುವ ಸ್ಥಳದ ಫೋಟೋಗಳನ್ನು ಹಂಚಿಕೊಂಡಿದೆ.
ಸಾಮಾನ್ಯವಾಗಿ ಭಾರತದಲ್ಲಿ ಮೇಲ್ವರ್ಗದವರ ಮನೆಗಳಲ್ಲಿ ಎರಡೇರಡು ಬಾಗಿಲುಗಳಿರುತ್ತವೆ. ಮುಂದಿನ ಬಾಗಿಲು ಮೇಲ್ವರ್ಗದವರಿಗೆ ಹಾಗೂ ಹಿಂದಿನ ಬಾಗಿಲು ಕೆಳ ವರ್ಗದವರಿಗೆ ಮೀಸಲಾಗಿರುತ್ತದೆ. ಈಗ ಐಐಟಿ ಮದ್ರಾಸ್ ಸಹ ಅದೇ ಮಾನದಂಡ ಅನುಸರಿಸಿದ್ದು, ವೆಜ್ ಮತ್ತು ನಾನ್-ವೆಜ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಾಗಿಲುಗಳನ್ನು ತೆರೆದಿದೆ. ಬಾಗಿಲು ಮಾತ್ರವಲ್ಲದೆ ಪ್ರತ್ಯೇಕ ಪಾತ್ರೆಗಳು ಹಾಗೂ ಕೈತೊಳೆಯುವ ಸ್ಥಳವನ್ನು ಸಹ ನಿಗದಿಪಡಿಸಿದೆ.
ಐಐಟಿ ಮದ್ರಾಸ್ ವಿಶ್ವಮಟ್ಟದ ಸಂಸ್ಥೆಯಾಗಲು ಪ್ರಯತ್ನಿಸುತ್ತಿದೆ, ಆದರೆ ಅದರೊಳಗಿನ ಸಂಸ್ಕೃತಿ ಮಾತ್ರ ಕೀಳುಮಟ್ಟದಲ್ಲಿದೆ ಎಂದು ಕೆಲ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಪ್ರತ್ಯೇಕವಾಗಿ ವಿಚಾರಿಸಿದ್ದು, ಸ್ವತಃ ಸಂಸ್ಥೆಯೇ ವೆಜ್ ಮತ್ತು ನಾನ್-ವೆಜ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ.
ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಮೂರು ಮಹಡಿಯ ಹಿಮಾಲಯ ಮೆಸ್ ಇದ್ದು, ಇದರಲ್ಲಿ ಆರು ಮೆಸ್ ಗಳಿಗೆ. ವಿದ್ಯಾರ್ಥಿಗಳು ರಜೆಗೆ ತೆರಳಿರುವುದರಿಂದ ನಾಲ್ಕು ಮೆಸ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಎರಡು ದಕ್ಷಿಣ ಭಾರತದ ಹಾಗೂ ಎರಡು ಉತ್ತರ ಭಾರತದ ಶೈಲಿಯ ಆಹಾರ ನೀಡುತ್ತಿವೆ.
ಎರಡನೇ ಮಹಡಿಯಲ್ಲಿರುವ ಆರ್ ಆರ್ ಉತ್ತರ ಭಾರತದ ಮೆಸ್ ನಲ್ಲಿ ಈ ಹೊಸ ಪದ್ದತಿ ಜಾರಿಗೆ ತರಲಾಗಿದ್ದು, ಮೆಸ್ ಮೇಲ್ವಿಚಾರಣಾ ಸಮಿತಿಯೇ ವೆಜ್ ಮತ್ತು ನಾನ್-ವೆಜ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿರುವುದಾಗಿ ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics