ಹೈದ್ರಾಬಾದ್ : ಇತ್ತೀಚಿಗೆ ಮುಕ್ತಾಯಗೊಂಡ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತಗೊಂಡ 119 ಶಾಸಕರಲ್ಲಿ 73 ಕ್ಕೂ ಹೆಚ್ಚು ಶಾಸಕರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ.
ದೆಹಲಿ ಮೂಲದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದ ವಿಶ್ಲೇಷಣೆಯ ಪ್ರಕಾರ, 47 ಶಾಸಕರ ಮೇಲೆ ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತಿತರ ಗಂಭೀರ ಪ್ರಕಾರದ ಕ್ರೀಮಿನಲ್ ಕೇಸ್ ಗಳು ದಾಖಲಾಗಿವೆ.
119 ಶಾಸಕರ ಪೈಕಿ 73 ಶಾಸಕರು ತಮ್ಮ ಮೇಲಿನ ಕ್ರಿಮಿನಲ್ ಕೇಸ್ ಗಳನ್ನು ಘೋಷಿಸಿಕೊಂಡಿದ್ದಾರೆ. 2014ರಲ್ಲಿ ಶೇ. 56 ರಷ್ಟು ಮಂದಿ ತಮ್ಮ ಮೇಲಿನ ಕ್ರಿಮಿನಲ್ ಕೇಸ್ ಗಳನ್ನು ಘೋಷಿಸಿಕೊಂಡಿದ್ದರು. ಆದರೆ, ಈ ಬಾರಿ ಶೇ, 67 ರಷ್ಟು ಮಂದಿ ತಮ್ಮ ವಿರುದ್ಧದ ಅಪರಾಧ ಪ್ರಕರಣಗಳನ್ನು ಬಹಿರಂಗಪಡಿಸಿಕೊಂಡಿದ್ದಾರೆ.
2014ರ ಚುನಾವಣೆ ಸಂದರ್ಭದಲ್ಲಿ ಕೊಲೆ ಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತಿತರ ಗಂಭೀರ ಪ್ರಕರಣಗಳ ಬಗ್ಗೆ ಶೇ. 40 ರಷ್ಟು ಮಂದಿ ಘೋಷಿಸಿಕೊಂಡಿದ್ದರು. ಆದರೆ. ಈ ಬಾರಿ ಶೇ.47 ರಷ್ಟು ಇಂತಹ ಅಪರಾಧಗಳ ಬಗ್ಗೆ ಬಹಿರಂಗಪಡಿಸಿಕೊಂಡಿದ್ದಾರೆ ಎಂದು ಎಡಿಆರ್ ಹೇಳಿದೆ.