ರಾಜಸ್ಥಾನದ 199 ಶಾಸಕರ ಪೈಕಿ 158 ಶಾಸಕರು ಕರೋಡ್ ಪತಿಗಳು! 
ದೇಶ

ರಾಜಸ್ಥಾನದ 199 ಶಾಸಕರ ಪೈಕಿ 158 ಶಾಸಕರು ಕರೋಡ್ ಪತಿಗಳು!

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ಈಗ ಆಯ್ಕೆಯಾಗಿರುವ ಹೊಸ ಶಾಸಕರದ್ದೇ ಚರ್ಚೆ.

ಜೈಪುರ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ಈಗ ಆಯ್ಕೆಯಾಗಿರುವ ಹೊಸ ಶಾಸಕರದ್ದೇ ಚರ್ಚೆ. ಹೊಸ ಶಾಸಕರ ಹಿನ್ನೆಲೆ ವಿವರಗಳನ್ನು ನೀಡಿರುವ ಎಡಿಆರ್ ವರದಿ, ರಾಜಸ್ಥಾನದಲ್ಲಿ 158 ಶಾಸಕರು ಕರೋಡ್ ಪತಿಗಳಾಗಿದ್ದಾರೆ ಎನ್ನುತ್ತಿದೆ.
ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿರುವ 199 ಶಾಸಕರ ಪೈಕಿ 158 ಶಾಸಕರು ಕರೋಡ್ ಪತಿಗಳಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕರೋಡ್ ಪತಿ ಶಾಸಕರು ಆಯ್ಕೆಯಾಗಿದ್ದಾರೆ. 
2013 ರ ವಿಧಾನಸಭಾ ಚುನಾವಣೆ ಯಲ್ಲಿ 145 ಕರೋಡ್ ಪತಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್ ನ 82 ಶಾಸಕರು, ಬಿಜೆಪಿಯ 58 ಶಾಸಕರು. 11 ಪಕ್ಷೇತರ ಶಾಸಕರು, 5 ಬಿಎಸ್ ಪಿ ಶಾಸಕರು ತಮ್ಮ ಆಸ್ತಿಯ ಮೌಲ್ಯವನ್ನು ಒಂದು ಕೋಟಿಗೂ ಹೆಚ್ಚು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ವರದಿ ಮೂಲಕ ತಿಳಿದುಬಂದಿದೆ. 
ಕಾಂಗ್ರೆಸ್ ನ ಶಾಸಕ ಪರಸ್ ರಾಮ್ ಮೋರ್ಡಿಯಾ (172 ಕೋಟಿ) ಹಾಗೂ  ಉದಯ್ ಲಾಲ್ ಅಂಜನ (107 ಕೋಟಿ) ಪಕ್ಷೇತರ ಅಭ್ಯರ್ಥಿ ರಾಮ್ಕೇಶ್ ಮೀನಾ (39 ಕೋಟಿ ರೂಪಾಯಿ) ಆಸ್ತಿ ಘೋಷಿಸಿಕೊಂಡಿದ್ದಾರೆ. ಕರೋಡ್ ಪತಿ ಶಾಸಕರ ಪೈಕಿ ಅತಿ ಕಿರಿಯ ಶಾಸಕ ರಾಜ್ ಕುಮಾರ್ ರೌಟ್, ಮುಖೇಶ್ ಕುಮಾರ್ ಭಕರ್ ಹಾಗೂ ರಾಮ್ನಿವಾಸ್ ಗವ್ರಿಯಾ ಸಹ ಇದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!