ದೇಶ

ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ವರದಿ ಸಿಕ್ಕಿಲ್ಲವಾದರೆ ಖರ್ಗೆ ಕೋರ್ಟ್ ಗೆ ಹೋಗಲಿ: ಸ್ವಾಮಿ ಸಲಹೆ

Srinivas Rao BV
ನವದೆಹಲಿ: ರಾಫೆಲ್ ಒಪ್ಪಂದದ ಕುರಿತು ಸಿಎಜಿ ವರದಿ ಸಂಸತ್ತಿನಲ್ಲಿ ಎಂದು ಮಂಡನೆಯಾಗಿದೆ ಎಂಬ  ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. 
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ, " ಖರ್ಗೆ ಅವರಿಗೆ ಸಿಎಜಿ ವರದಿ ಸಿಕ್ಕಿಲ್ಲವೆಂದಾದರೆ, ಕೋರ್ಟ್ ನಲ್ಲಿ ಅದನ್ನೇ ಹೇಳಿ ಪ್ರಮಾಣಪತ್ರ ಅಥವಾ ಮರುಪರಿಶೀಲನಾ ಅರ್ಜಿ ಸಲ್ಲಿಸಲಿ ಎಂದು ಹೇಳಿದ್ದಾರೆ. 
"ಮಲ್ಲಿಕಾರ್ಜುನ ಅವರಿಗೆ ಸಿಎಜಿ ವರದಿ ಸಿಕ್ಕಿಲ್ಲವಾದರೆ, "ನನಗೆ ಸಿಎಜಿ ವರದಿ ಸಿಕ್ಕಿಲ್ಲ, ಸಾರ್ವಜನಿಕ ಲೆಕ್ಕ ಸಮಿತಿಯೂ ಸಿಎಜಿ ವರದಿಯನ್ನು ಪರಿಶೀಲನೆ ಮಾಡಿಲ್ಲ ಎಂದು ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಿ" ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. 
SCROLL FOR NEXT