ದೇಶ

ಭಾರತೀಯ ಸೇನೆ ಇಲ್ಲದಿದ್ದರೆ ನಾವು ಸ್ವತಂತರಾಗುವುದು ಸಾಧ್ಯವಿರಲಿಲ್ಲ: ಬಾಂಗ್ಲಾ ಪ್ರತಿನಿಧಿ ಕ್ವಾಜಿ ರೊಸಿ

Raghavendra Adiga
ಕೋಲ್ಕತ್ತಾ: 1971ರ ಯುದ್ಧದಲ್ಲಿ ಭಾರತೀಯ ಸೇನೆಯ ನೆರವಿಲ್ಲದೆ ಹೋಗಿದ್ದರೆ ನಾವು ಪಾಕ್ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರ ರಾಷ್ಟ್ರವಾಗಲು ಸಾಧ್ಯವಾಗುತ್ತಿರಲಿಲ್ಲ, ಎಂದು ಬಾಂಗ್ಲಾದೇಶದ ಸಂಸದೀಯ ಪಟು  ಬಾಂಗ್ಲಾದೇಶ ನಿಯೋಗದ ಮುಖ್ಯಸ್ಥ ಎಂಪಿ ಕ್ವಾಜಿ ರೊಸಿ ಹೇಳಿದ್ದಾರೆ.  
ಇಂದು (ಡಿಸೆಂಬರ್ 16) 1971ರ ಯುದ್ಧದಲ್ಲಿ ಬಾಂಗ್ಲಾದೇಶ ವಿಮುಕ್ತಗೊಂಡ ದಿನವಾಗಿದ್ದು ಈ ಸಮಯದಲ್ಲಿ ರೊಸಿ ಭಾರತೀಯ ಸೈನ್ಯದ ಸಹಕಾರವನ್ನು ಸ್ಮರಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆಯಲಿರುವ ಬಿಇಜಯ್ ದಿವಸ್ ಕಾರ್ಯಕ್ರಮಕ್ಕೆ ಆಗಮಿಸಿರುವ ಬಾಂಗ್ಲಾದೇಶ ನಿಯೋಗದ ನೇತೃತ್ವವನ್ನು ಕ್ವಾಜಿ ರೊಸಿ ವಹಿಸಿದ್ದಾರೆ. ಯುದ್ಧದ ಸಮಯದಲ್ಲಿ ಭಾರತೀಯ ಸೇನೆ ಈಗಿನ ರೊಹಿಂಗ್ಯಾಗಳ ಪ್ರಕರಣಕ್ಕಿಂತ ಉತ್ತಮವಾಗಿ ನಮ್ಮನ್ನು ಕಂಡಿತ್ತು ಎಂದು ಅವರು ವಿವರಿಸಿದರು.
ಪೂರ್ವ ಕಮಾಂಡೋ ಪ್ರಧಾನ ಕಛೇರಿಯಲ್ಲಿರುವ ಆಲ್ಬರ್ಟ್ ಏಕಾ ಆಡಿಟೋರಿಯಂ ನಲ್ಲಿ ಭಾರತೀಯ ಸೇನೆಯ ಯೋಧರನ್ನುದ್ದೇಶಿಸಿ ಮಾತನಾಡಿದ ರೋಸಿ  "ನಾವು ಯುದ್ಧದಲ್ಲಿ ಹೋರಾಡಿದ್ದೇವೆ ನೀವು, ಸೈನಿಕರು, ನಮ್ಮನ್ನು ಬೆಂಬಲಿಸಿದ್ದಿರಿ. ನಾನು ನಿಮಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ನೀವು ಅಲ್ಲಿ ಇಲ್ಲದಿದ್ದರೆ, ನಾವು ಇಷ್ಟು ಶೀಘ್ರವಾಗಿ ಸ್ವಾತಂತ್ರ ಪಡೆಯುತ್ತಿರಲಿಲ್ಲ.
"ವಿಯೆಟ್ನಾಂ ಒಂಬತ್ತು ವರ್ಷಗಳ ಕಾಲ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ ಮತ್ತು ನಾವು ಅದನ್ನು ಒಂಬತ್ತು ತಿಂಗಳಲ್ಲಿ ಪಡೆದಿದ್ದೆವು. ಇದು ನಿಮ್ಮ ಕಾರಣದಿಂದ ಮಾತ್ರ ಸಾಧ್ಯವಾಯಿತು 
"ಇಂದು ನಾವು ನಿಮ್ಮ ಕಾರಣದಿಂದ ಇಲ್ಲಿದ್ದೇವೆ, ನಾನು ನಿಮಗೆ ವಂದನೆ ಸಲ್ಲಿಸಬೇಕು" ಎಂದು ಅವರು ಹೇಳಿದ್ದಾರೆ.
SCROLL FOR NEXT