ಬೆಂಗಳೂರು: ವರ್ಷಾಂತ್ಯದ ಕ್ರಿಸ್ ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗೋವಾಕ್ಕೆ ತೆರಳುವವರ ಸಂಖ್ಯೆ ಹೆಚ್ಚಿರಲಿದ್ದು, ಸೌತ್ ವೆಸ್ಟ್ರನ್ ರೈಲ್ವೆ (ಎಸ್ ಡಬ್ಲ್ಯೂ ಆರ್) ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವುದಕ್ಕಾಗಿ ಗೋವಾಗೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ.
ಡಿ.28 ರಿಂದ ಜ.2 ವರೆಗೆ ವಿಶೇಷ ರೈಲುಗಳು ಯಶವಂತಪುರ-ವಾಸ್ಕೋ-ಡಾ-ಗಾಮ ಹಾಗೂ ವಾಸ್ಕೊ-ಡಾ-ಗಾಮ- ಯಲಹಂಕ ನಡುವೆ ಸಂಚರಿಸಲಿವೆ. ರೈಲು ಸಂಖ್ಯೆ 06585 ಯಶವಂತಪುರ-ವಾಸ್ಕೋ-ಡಾ-ಗಾಮ ತತ್ಕಾಲ್ ವಿಶೇಷ ಎಕ್ಸ್ ಪ್ರೆಸ್ ರೈಲು ಡಿ.28 ರಂದು ಯಶವಂತಪುರದಿಂದ ಸಂಜೆ 6 ಕ್ಕೆ ಹೊರಡಲಿದ್ದು, ಡಿ.29 ರ ಬೆಳಿಗ್ಗೆ 9:10 ಕ್ಕೆ ವಾಸ್ಕೋ ಡಾ-ಗಾಮಕ್ಕೆ ತಲುಪಲಿದೆ. ಜ.1 ರಂದು ವಾಸ್ಕೊ-ಡಾ-ಗಾಮದಿಂದ ಬೆಳಿಗ್ಗೆ 8:40 ಕ್ಕೆ ಹೊರಡಲಿರುವ 06586 ನಂಬರ್ ನ ರೈಲು ಜ.2 ರಂದು ಬೆಳಿಗ್ಗೆ 11:45ಕ್ಕೆ ಯಲಹಂಕಾ ತಲುಪಲಿದೆ.
ಇದೇ ವೇಳೆ ಇರುಮುಡಿ ಹಬ್ಬ ಇರುವುದರಿಂಡ ವಿಲ್ಲುಪುರಂ ಗೂ ಸಹ ಎಸ್ ಡಬ್ಲ್ಯೂ ಆರ್ ವಿಶೇಷ ರೈಲು ಸೇವೆ ಒದಗಿಸುತ್ತಿದೆ.