ಟೇಕ್ ಆಫ್ ಆದ ವಿಮಾನದಲ್ಲಿ ಧೂಮಪಾನ ಮಾಡಲು ಮುಂದಾದ ಪ್ರಯಾಣಿಕನನ್ನು ಮಾರ್ಗಮಧ್ಯದಲ್ಲೇ ಟಾಟಾ ಸನ್ಸ್ ಒಡೆತನದ ವಿಸ್ತಾರ ವಿಮಾನ ಸಂಸ್ಥೆ ಕೆಳಗಿಳಿಸಿದೆ.
ಅಮೃತಸರ-ದೆಹಲಿ-ಕೋಲ್ಕತ್ತಾ (ಯುಕೆ 946-ಯುಕೆ 707) ವಿಮಾನದಲ್ಲಿ ಈ ಘಟನೆ ನಡೆದಿದ್ದು, ಎರಡು ಕಾರಣಗಳಿಂದಾಗಿ ವಿಮಾನ 1.5 ಗಂಟೆ ತಡವಾಗಿ ನಿಗದಿತ ಸ್ಥಳವನ್ನು ತಲುಪಿದೆ. ಮೊದಲನೆ ಘಟನೆಯಲ್ಲಿ ಕುಟುಂಬವೊಂದು ತುರ್ತು ಅಗತ್ಯವಿದ್ದ ಕಾರಣ ದೆಹಲಿಯಲ್ಲಿ ಇಳಿದಿದ್ದರೆ, ನಂತರ ಕೋಲ್ಕತ್ತಾಗೆ ತೆರಳಬೇಕಿದ್ದ ಪ್ರಯಾಣಿಕನೋರ್ವ ಧೂಮಪಾನ ಮಾಡಲು ಕೇಳಿ, ವಿಮಾನ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಆತನ ವರ್ತನೆಯ ಹಿನ್ನೆಲೆಯಲ್ಲಿ ವಾಪಸ್ ದೆಹಲಿಗೆ ಹೋಗಿ ಆತನನ್ನು ಕೆಳಗಿಳಿಸಲಾಯಿತು ಎಂದು ವಿಮಾನ ಸಂಸ್ಥೆ ತಿಳಿಸಿದೆ.