ಗಡ್ಕರಿ 
ದೇಶ

ಯಶಸ್ಸಿಗೆ ಹಲವರು ಇರುತ್ತಾರೆ, ಸೋಲು ಅನಾಥ: ಮೋದಿ ಬಗ್ಗೆ ಗಡ್ಕರಿ ಪರೋಕ್ಷ ಅಸಮಾಧಾನ?

5 ರಾಜ್ಯಗಳ ಚುನಾವಣೆಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಯಶಸ್ಸಿನ ಹೊಣೆ ಹೊರಲು ಹಲವರು ಸಿದ್ಧರಿರುತ್ತಾರೆ. ಆದರೆ ಸೋಲು ಅನಾಥ ಎಂದು ಹೇಳಿದ್ದಾರೆ.

ಪುಣೆ: 5 ರಾಜ್ಯಗಳ ಚುನಾವಣೆಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಯಶಸ್ಸಿನ ಹೊಣೆ ಹೊರಲು ಹಲವರು ಸಿದ್ಧರಿರುತ್ತಾರೆ. ಆದರೆ ಸೋಲು ಅನಾಥ ಎಂದು ಹೇಳಿದ್ದಾರೆ. 
ಯಶಸ್ಸಿನ ಕೀರ್ತಿ ಹೊತ್ತುಕೊಳ್ಳುವುದಕ್ಕೆ ಸಿದ್ಧವಿರುವ ರೀತಿಯಲ್ಲಿ ಸೋಲಿನ ಹೊಣೆ ಹೊತ್ತುಕೊಳ್ಳುವುದಕ್ಕೆ ಯಾರೂ ಮುಂದಾಗುವುದಿಲ್ಲ ಎಂದು ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಹೇಳಿದ್ದಾರೆ.  ಕೆಲವೊಮ್ಮೆ ಬ್ಯಾಂಕ್ ಗಳು ಯಶಸ್ಸು ಗಳಿಸುತ್ತವೆ ಹಾಗೂ ಕೆಲವೊಮ್ಮೆ ಸೋಲನ್ನೂ ಕಂಡಿರುತ್ತವೆ. ಬ್ಯಾಂಕ್ ಗಳು ಎರಡೂ ರೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕು, ರಾಜಕೀಯದಲ್ಲೂ ಅಷ್ಟೇ ಸೋಲು ಎದುರಾದಾಗ ಸಮಿತಿ ರಚನೆ ಮಾಡುತ್ತಾರೆ. ಅದೇ ಗೆದ್ದಾಗ ಯಾರನ್ನೂ ಕೇಳುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ. 
ಸೋಲಿನ ಹೊಣೆ ಹೊರುವುದೂ ಸಹ ನಾಯಕತ್ವದ ಭಾಗವಾಗಿರಬೇಕು, ಸೋಲಿಗೆ ಹೊಣೆ ಹೊರುವವರೆಗೂ ಸಂಘಟನೆಯೆಡೆಗೆ ನಾಯಕತ್ವದ ನಿಷ್ಠೆ ಸಾಬೀತಾಗುವುದಿಲ್ಲ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

SCROLL FOR NEXT