ಮಮತಾ ಬ್ಯಾನರ್ಜಿ - ಕೆ ಚಂದ್ರಶೇಖರ್ ರಾವ್ 
ದೇಶ

ಫೆಡರಲ್ ಫ್ರಂಟ್ ರಚನೆ ಮಾತುಕತೆ ಮುಂದುವರೆಯಲಿದೆ: ಮಮತಾ ಭೇಟಿ ಬಳಿಕ ಕೆಸಿಆರ್

ಟಿಆರ್ ಎಸ್ ಮುಖ್ಯಸ್ಥ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸೋಮವಾರ ಕೋಲ್ಕತಾದಲ್ಲಿ....

ಕೋಲ್ಕತಾ: ಟಿಆರ್ ಎಸ್ ಮುಖ್ಯಸ್ಥ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸೋಮವಾರ ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ.
ಮಮತಾ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ಫೆಡರಲ್ ಫ್ರಂಟ್ ರಚಿಸುವ ಮಾತುಕತೆ ಮುಂದುವರೆಯಲಿದೆ ಮತ್ತು ಈ ಕುರಿತು ಶೀಘ್ರದಲ್ಲೇ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುಗು ಎಂದು ಹೇಳಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಮೈತ್ರಿಕೂಟ ರಚನೆಯ ನನ್ನ ಪ್ರಯತ್ನ ಮುಂದುವರೆಯಲಿದೆ ಎಂದು ತೆಲಂಗಾಣ ಸಿಎಂ ತಿಳಿಸಿದ್ದಾರೆ.
ಇದು ದೇಶಾದ್ಯಂತ ಎಲ್ಲ ಶಕ್ತಿಗಳನ್ನು ಒಂದುಗೂಡಿಸುವ ಪ್ರಯತ್ನ. ನಿನ್ನೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿ ಮಾಡಿದ್ದೆ. ಇಂದು ಮಮತಾಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿಯೇತರ ರಂಗ ರಚನೆಯ ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೆಸಿಆರ್, ‘ಇದು ಒಂದೇ ಭೇಟಿಯಲ್ಲಿ ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳುವಂತಹ ಪ್ರಕ್ರಿಯೆ ಅಲ್ಲ. ಎಲ್ಲರ ಜತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಈ ರಂಗ ರಚನೆಯ ಯೋಜನೆಯ ರೂಪುರೇಷೆ ರೂಪಿಸಲಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಸಿಹಿ ಸುದ್ದಿ ನೀಡುತ್ತೇವೆ’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ CM ಗದ್ದುಗೆ! ನಾಳೆ ನಿತೀಶ್ ರಾಜೀನಾಮೆ? ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ನೋಯ್ಡಾ: ಹಿಂಸಾಚಾರಕ್ಕೆ ತಿರುಗಿದ ಕಾರ್ಮಿಕರ ಪ್ರತಿಭಟನೆ; ಕಲ್ಲು ತೂರಾಟ, ಬೆಂಕಿ ಹಚ್ಚಿ ಆಕ್ರೋಶ

Sex Video ಪ್ರಕರಣ: ಸ್ವಯಂ ಘೋಷಿತ 'ದೇವಮಾನವ' ಅಶೋಕ್ ಖರತ್ ಮನೆ, ಕಚೇರಿ ಮೇಲೆ ED ದಾಳಿ

SCROLL FOR NEXT