ಸಂಗಹ ಚಿತ್ರ 
ದೇಶ

ಆಂಧ್ರಪ್ರದೇಶದಲ್ಲಿ ಹಸುವಿನ ಮೇಲೆ ಮಾರಣಾಂತಿಕ ಹಲ್ಲೆ:ಮಾಲೀಕನಿಂದ ಲೈಂಗಿಕ ದೌರ್ಜನ್ಯ ಕೇಸ್ ದಾಖಲು

ಹಸುವೊಂದರ ಮೇಲೆ ಕ್ರೂರವಾಗಿ ಹಲ್ಲೆಯಾಗಿರುವ ಸಂಬಂಧ ಹಸುವಿನ ಮಾಲೀಕ ಪೋಲೀಸರಿಗೆ ದೂರಿತ್ತಿದ್ದು.ದೂರಿನಲ್ಲಿ ಅವರು ತನ್ನ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ.....

ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಹಸುವೊಂದರ ಮೇಲೆ ಕ್ರೂರವಾಗಿ ಹಲ್ಲೆಯಾಗಿರುವ ಸಂಬಂಧ ಹಸುವಿನ ಮಾಲೀಕ ಪೋಲೀಸರಿಗೆ ದೂರಿತ್ತಿದ್ದು.ದೂರಿನಲ್ಲಿ ಅವರು ತನ್ನ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಘಟನೆ ಆಂದ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ನಿವಾಸಿ ಎನ್. ಲಕ್ಷ್ಮಿನಾರಾಯಣ ಎಂಬುವವರು ಈ ದೂರು ಸಲ್ಲಿಸಿದ್ದು . ಡಿಸೆಂಬರ್ 23ರ ಬೆಳಿಗ್ಗೆ ತನ್ನ ಹಸು ಕಾಣೆಯಾಗಿತ್ತು, ಬಳಿಕ ಅಲ್ಲಿ ಇಲ್ಲಿ ಹುಡುಕಿದ ಲಕ್ಷ್ಮಿನಾರಾಯಣ ರಿಗೆ ಗೋಕಿವಾಡ ಗ್ರಾಮದ ಕೆ ಸೂರ್ಯಪ್ರಕಾಸ ರಾವ್ ಅವರ ಹೊಲದಲ್ಲಿ  ತನ್ನ ಹಸುವು ಪತ್ತೆಯಾಗಿದೆ. ಹಸುವಿನ ಮೇಲೆ ಕ್ರೂರವಾಗಿ ಹಲ್ಲೆ, ಆಕ್ರಮಣ ನಡೆದಿರುವುದು ಪತ್ತೆಯಾಗಿದೆ.ಅಲ್ಲದೆ ಹಸುವಿನ ಮೇಲೆ ಯಾರೋ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ ಎಂದು ಪಿತಾಪುರಮ್ ಗ್ರಾಮೀಣ ಭಾಗದ ಸಬ್ ಇನ್ಸ್ ಪೆಕ್ಟರ್ ಪಿ.ವಿ ಆರ್ ಮೂರ್ತಿ ಹೇಳಿದ್ದಾರೆ.
ಅಪರಾಧ ಸಂಖ್ಯೆ (ಕ್ರೈಮ್ ನಂಬರ್)92/2018, ಸೆಕೆಂಡ್ 2 (1) (ಎ) ಪ್ರಾಣಿಗಳ ಕಾಯ್ದೆ 1960ರ ಅಡಿಯಲ್ಲಿ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಇನ್ನೂ ಖಚಿತವಾಗಿಲ್ಲ.ಪಶುವೈದ್ಯರಿಂದ  ವರದಿ ಬಂದ ಬಳಿಕವಷ್ಟೇ ಇದು ಖಾತರಿಯಾಗಲಿದೆ ಎಂದು ಪೋಲೀಸರು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

SCROLL FOR NEXT