ದೇಶ

ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಾಮಮಂದಿರ ವಿಚಾರ ಬಳಸಿಕೊಂಡಿರಿ: ಮೋದಿ ವಿರುದ್ಧ ಠಾಕ್ರೆ ವಾಗ್ದಾಳಿ

Manjula VN
ಸೋಲಾಪುರ: ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಅಯೋಧ್ಯೆ ರಾಮ ಮಂದಿರ ವಿಚಾರವನ್ನು ಬಳಸಿಕೊಂಡಿರಿ. ರಾಮ ಮಂದಿರ ನಿರ್ಮಾಣಗೊಳ್ಳುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಸೋಮವಾರ ಹೇಳಿದ್ದಾರೆ. 
ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿರುವವ ಉದ್ಧವ್ ಠಾಕ್ರೆಯವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡದಿದ್ದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 
ದೇಶದಲ್ಲಿ ಸಾಕಷ್ಟು ಹಗರಣಗಳು ನಡೆಯುತ್ತಿವೆ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಕಾಂಗ್ರೆಸ್ ಘೋಷಣೆಗಳಂತೆಯೇ ಚೌಕಿದಾರ್ ಕಳ್ಳರಾಗಿ ಹೋದಂತಾಗಿದೆ. ರಕ್ಷಣಾ ಇಲಾಖೆಯಲ್ಲಿ ಹಾಗೂ ಕೃಷಿ ಇಲಾಖೆಗಳಲ್ಲಿ ಹಗರಣಗಳು ಕಂಡು ಬರುತ್ತಿದೆ. ಪ್ರತೀ ಭಾರತೀಯರ ಬ್ಯಾಂಕ್ ಖಾತೆಗೆ ಈ ವರೆಗೂ ರೂ.15 ಲಕ್ಷ ಬಂದಿಲ್ಲ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿಲ್ಲ ಎಂದು ತಿಳಿಸಿದ್ದಾರೆ. 

ಚುನಾವಣೆ ಬಂತೆಂದರೆ ಸಾಕು ಬಿಜೆಪಿ ರಾಮ ಮಂದಿರ ವಿಚಾರದ ಬಗ್ಗೆ ಮಾತನಾಡಲು ಆರಂಭಿಸುತ್ತದೆ. ಆದರೆ, ಸಾಧನೆ ಮಾಡಿದ್ದು ಮಾತ್ರ ಏನೂ ಇಲ್ಲ. ನವೆಂಬರ್ ತಿಂಗಳಿನಲ್ಲಿ ನಾನು ಅಯೋಧ್ಯೆಗೆ ಭೇಟಿ ನೀಡಿದ್ದೆ. ಕುಂಭಕರ್ಣನಂತಹ ಸರ್ಕಾರವನ್ನು ಎಬ್ಬಿಸುವ ಸಲುವಾಗಿ ನಾನು ಅಯೋಧ್ಯೆಗೆ ಹೋಗಿದ್ದೆ. ಚುನಾವಣೆ ಲಾಭಕ್ಕಾಗಿ ನೀವು ರಾಮ ಮಂದಿರ ವಿಚಾರವನ್ನು ಬಳಸಿಕೊಂಡಿರಿ. 

ರಾಮ ಮಂದಿರ ನಿರ್ಮಾಣಗೊಳ್ಳುವವರೆಗೂ ನಾವು ಮಲಗುವುದಿಲ್ಲ. 2022ರೊಳಗಾಗಿ ಸಾಧಿಸುತ್ತೇವೆಂದು ಪ್ರಧಾನಮಂತ್ರಿಗಳು ಎಲ್ಲಾ ರೀತಿಯ ಭರವಸೆಗಳನ್ನು ನೀಡುತ್ತಾರೆ. ಇದರ ಅರ್ಧ 2019ರ ಚುನಾವಣೆಯಲ್ಲಿ ಜನರು ನನಗೆ ಮತ ಹಾಕಲಿ ಎಂದು. ಇದಾದ ಬಳಿಕ ಚುನಾವಣೆ ಬಂತೆಂದರೆ ಮತ್ತೆ ಸುಳ್ಳಲು ಹೇಳಲು ಆರಂಭಿಸುತ್ತಾರೆ.

ರಾಮ ಮಂದಿರ ವಿಚಾರ ಬಗ್ಗೆ ಮಾತನಾಡಿದರೆ, ಈ ವಿಚಾರ ನ್ಯಾಯಾಲಯದ ಅಂಗಳದಲ್ಲಿದೆ ಎಂದು ಹೇಳುತ್ತಾರೆ. ಆದರೆ, 30 ವರ್ಷಗಳಿಂದ ಎಲ್ಲಿಗೆ ಎಂಬುದು ಅವರಿಗೆ ಗೊತ್ತಿರಲಿಲ್ಲವೇ? ಎಂದಿದ್ದಾರೆ. 

ಇದೇ ವೇಳೆ ಬಿಜೆಪಿ ಜೊತೆಗೆ ಕೈಜೋಡಿಸಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಲೋಕ ಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಲ್ವಾನ್ ಅವರಿಗೆ ಶುಭಾಶಯಗಳನ್ನು ಹೇಳಿರುವ ಅವರು, ರಾಮ ಮಂದಿರ ವಿಚಾರ ಸಂಬಂಧ ಅವರ ನಿಲುವೇನು? ಈ ಬಗ್ಗೆ ಅವರೇಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. 

ಇಲ್ಲದೆ, ರಾಮ ಮಂದಿರ ವಿಚಾರ ಹಾಗೂ ಹಿಂದುತ್ವ ವಿಚಾರಗಳ ಬಗ್ಗೆ ಸಂಸದೀಯ ಚರ್ಚೆಗಳು ನಡೆಸಬೇಕು. ಚರ್ಚೆ ನಡೆದರೆ, ಎನ್'ಡಿಎ ಪರವಾಗಿ ಹಾಗೂ ವಿರೋಧವಾಗಿ ಯಾರಿದ್ದಾರೆಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ. 
SCROLL FOR NEXT