ಮುಂಬೈನಲ್ಲಿ ಅಗ್ನಿ ಅನಾಹುತ: ನಾಲ್ವರು ಹಿರಿಯ ನಾಗರಿಕರ ದುರ್ಮರಣ
ಮುಂಬೈ: ಮುಂಬೈನ ಪೂರ್ವ ಉಪನಗರ ಚೆಂಬೂರ್ ನ ತಿಲಕ್ ನಗರದಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಿಂದ ನಾಲ್ವರು ಹಿರಿಯ ನಾಗರಿಕರು ಸಾವವನ್ನಪ್ಪಿದ್ದಾರೆ.
ಸಂಗಮ್ ಸೊಸೈಟಿಯ 10ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಸುಮಾರು 16 ಅಂತಸ್ತಿನ ಕಟ್ಟಡದ ಸುತ್ತಲೂ ಸುಮಾರು 10 ಅಗ್ನಿಶಾಮಕ ವಾಹನಗಳು ರ್ ಮತ್ತು ಐದು ಟ್ಯಾಂಕರ್ ಗಳೂ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ.
ಸುಮಾರು 10.20 ಗಂಟೆ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಅದು ಒಂದು ದೊಡ್ಡ ಸ್ಫೋಟದ ನಂತರ ಹರಡಿತ್ತು ಎನ್ನಲಾಗಿದೆ. ಗ್ಯಾಸ್ ಸಿಲಿಂಡರ್,ಸ್ಪೋಟದಿಂದ ಈ ಅವಘಡ ಉಂತಾಗಿರಬಹುದು ಎಂದು ಅಧಿಕಾರಿಗಳು ಭಾವಿಸಿದ್ದಾರೆ.
ಮೃತರನ್ನು ಸುನೀತಾ ಮತ್ತು ಭಾಲಚಂದ್ರ (72), ಸುಮನ್ (83) ಮತ್ತು ಶ್ರೀನಿವಾಸ್ (86) ಎಂದು ಗುರುತಿಸಲಾಗಿದೆ. ಈ ಎಲ್ಲರೂ ಜೋಷಿ ಕುಟುಂಬಕ್ಕೆ ಸೇರಿದ್ದರು.
ಕಳೆದ ವಾರದ ಮುಂಬೈನ ನಾನಾ ಕಡೆ ನಡೆದ ಬೆಂಕಿ ಅನಾಹುತದಲ್ಲಿ ಸುಮಾರು 20 ಮಂದಿ ಮರಣಿಸಿದ್ದರು.