ಸಾಂದರ್ಭಿಕ ಚಿತ್ರ 
ದೇಶ

'ನನ್ನ ಮನೆ ಮುಂದೆ ಏಲಿಯನ್ ರೀತಿ ವಸ್ತು ಕಂಡೆ' ಎಂದು ಪ್ರಧಾನಿಗೆ ಪತ್ರ ಬರೆದ ಪುಣೆ ವ್ಯಕ್ತಿ

ತನ್ನ ಮನೆಯ ಕಿಟಕಿಯ ಹೊರಗೆ ಆಗಸದಲ್ಲಿ ಏಲಿಯನ್ ರೀತಿಯ ನಿಗೂಢ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪುಣೆಯ....

ಪುಣೆ: ತನ್ನ ಮನೆಯ ಕಿಟಕಿಯ ಹೊರಗೆ ಆಗಸದಲ್ಲಿ ಏಲಿಯನ್ ರೀತಿಯ ನಿಗೂಢ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪುಣೆಯ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಇ-ಮೇಲ್ ಮಾಡಿದ್ದಾರೆ.
ಪ್ರಧಾನಿ ಕಾರ್ಯಾಲಯ ಪುಣೆ ವ್ಯಕ್ತಿಯ ಇ-ಮೇಲ್ ಅನ್ನು ಮಹಾರಾಷ್ಟ್ರ ಪೊಲೀಸರಿಗೆ ರವಾನಿಸಿದ್ದು, ಕೂಡಲೇ ತನಿಖೆಗಿಳಿದ ಪೊಲೀಸರು, ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್‌ ಮಾಡಿದ 47ರ ವರ್ಷದ ವ್ಯಕ್ತಿ ಕೊಥ್ರೂಡ್‌ ಪ್ರದೇಶದ ನಿವಾಸಿ ಎಂಬುದು ಪತ್ತೆ ಹಚ್ಚಿದ್ದಾರೆ. ಆದರೆ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದೆ. ಆತನು ತನ್ನ ಮನೆಯ ಕಿಟಕಿಯ ಆಗಸದಲ್ಲಿ ಅನ್ಯಗ್ರಹ ವಸ್ತುವನ್ನು ಕಂಡದ್ದು ಕೇವಲ ಭ್ರಾಂತಿ ಎಂಬುದನ್ನು ಪೊಲೀಸರು ಅನಂತರ ಅರಿತುಕೊಂಡಿದ್ದಾರೆ.
ಏಲಿಯನ್ ರೀತಿಯ ವಸ್ತುವನ್ನು ಆಗಸದಲ್ಲಿ ಕಂಡೆನೆಂದು ಹೇಳಿಕೊಂಡಿದ್ದ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆ ಮೆದುಳಾಘಾತವಾಗಿತ್ತು. ಪರಿಣಾಮವಾಗಿ ಮಾನಸಿಕ ಸಂತುಲನೆಯನ್ನು ಕಳೆದುಕೊಂಡಿದ್ದ. ಕೆಲ ತಿಂಗಳ ಹಿಂದೆ ತನ್ನ ಮನೆಯ ಹೊರಗಿನ ಮರಗಳೆಡೆಯಿಂದ ಬೆಳಕು ಹರಿದು ಬರುತ್ತಿದ್ದುದನ್ನು ಕಂಡ ಈ ವ್ಯಕ್ತಿ ಅದನ್ನೇ ಅನ್ಯಗ್ರಹ ವಸ್ತುವೆಂದು ಭ್ರಮಿಸಿದ್ದ. ಈ ಅನ್ಯ ಗ್ರಹ ವಸ್ತುವು ಭೂಗ್ರಹದ ಬಹುಮುಖ್ಯ ಮಾಹಿತಿಗಳನ್ನು ತನ್ನ ಗ್ರಹಕ್ಕೆ ರವಾನಿಸುತ್ತಿದೆ ಎಂಬ ಭೀತಿ ಆತನನ್ನು ಕಾಡತೊಡಗಿತ್ತು. 
ಈ ಭೀತಿಯಲ್ಲಿ ಆತ ಪ್ರಧಾನಿ ಕಾರ್ಯಾಲಯಕ್ಕೆ ಇಮೇಲ್‌ ಕಳಿಸಿದ್ದ ಸಂಗತಿ ಆತನ ಮನೆಯವರಿಗೂ ಗೊತ್ತಿರಲಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

'ಸಾವು ಉತ್ತಮ': ಉದಯನಿಧಿ ಸ್ಟಾಲಿನ್ ಬಂಧನ ಬೆನ್ನಲ್ಲೇ ನಟಿ nivetha pethuraj ಪೋಸ್ಟ್ ವೈರಲ್!

ಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ, ವ್ಯಾಪಾರಿಗಳು ಬೇಸ್ತು! ಕಾರಣ ಏನು?